ಅಪಘಾತ: ಪೊಲೀಸ್ ಸಿಬ್ಬಂದಿಗೆ ಗಾಯ
Update: 2022-10-17 21:17 IST
ಉಡುಪಿ, ಅ.17: ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಅವರ ಅಂಗರಕ್ಷಕ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ಸಿಬ್ಬಂದಿ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ಅ.16ರಂದು ಸಂಜೆ ವೇಳೆ ಅಂಬಲಪಾಡಿ ಗ್ರಾಮದ ಅಭಿನಂದನಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ, ಕೊಡವೂರು ಬಾಚನಬೈಲ್ ನಿವಾಸಿ ಗಣೇಶ್ (46) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕರ್ತವ್ಯದ ನಿಮಿತ್ತ ಮನೆಯಿಂದ ಬೈಕಿನಲ್ಲಿ ಅಜ್ಜರಕಾಡುವಿನಲ್ಲಿರುವ ಯಶ್ಪಾಲ್ ಸುವರ್ಣರ ಮನೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಣೇಶ್ ಹಾಗೂ ಸ್ಕೂಟರ್ ಸವಾರ ಗಾಯಗೊಂಡರು. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.