×
Ad

ರಶ್ಯ ಸೇನಾ ವಿಮಾನ ಪತನ: 3 ಮಕ್ಕಳ ಸಹಿತ 13 ಮಂದಿ ಮೃತ್ಯು

Update: 2022-10-18 21:23 IST
Photo: NDTV 

ಮಾಸ್ಕೊ, ಅ.18: ರಶ್ಯದ ಸೇನಾ ವಿಮಾನವೊಂದು ಸೋಮವಾರ ರಾತ್ರಿ ಉಕ್ರೇನ್‍(Ukraine)ನ ಗಡಿಗೆ ಸನಿಹದಲ್ಲಿರುವ ಯೆಸ್ಕ್ ನಗರ(The city of Yesk)ದ ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದ್ದು  3 ಮಕ್ಕಳ ಸಹಿತ ಕನಿಷ್ಟ 13 ಮಂದಿ ಮೃತಪಟ್ಟಿದ್ದಾರೆ.  ಇತರ 19 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

9 ಮಹಡಿಯ ಕಟ್ಟಡಕ್ಕೆ ವಿಮಾನ ಅಪ್ಪಳಿಸುವ ಕೆಲಕ್ಷಣಗಳ ಮೊದಲು ಪೈಲಟ್‍ಗಳು ಪ್ಯಾರಾಶೂಟ್ ಬಳಸಿ ಹೊರ ನೆಗೆದಿದ್ದಾರೆ. ದೈನಂದಿನ ತರಬೇತಿಗಾಗಿ ಸಮೀಪದ ವಾಯುನೆಲೆಯಿಂದ ಗಗನಕ್ಕೆ ನೆಗೆದ ಜೆಟ್‍ವಿಮಾನ(jet plane)ದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ವಿಮಾನ ನಿಯಂತ್ರಣ ತಪ್ಪಿದೆ. ಪೈಲಟ್‍ಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಮಾನ ಅಪ್ಪಳಿಸಿದ ಕಾರಣ ಬಹುಮಹಡಿ ಕಟ್ಟಡದಲ್ಲಿ ದಟ್ಟ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ  ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News