×
Ad

ಆದಿತ್ಯನಾಥ್ ಮೇಲಿನ ವಿಡಂಬನಾತ್ಮಕ ಪೋಸ್ಟ್ ಅನ್ನು ಮರುಸ್ಥಾಪಿಸಿದ ಇನ್‌ಸ್ಟಾಗ್ರಾಮ್

Update: 2022-10-18 23:05 IST
Photo: cringearchivist/Twitter

ಹೊಸದಿಲ್ಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವರದಿ ಮಾಡಿದ ನಂತರ ಅಳಿಸಲಾಗಿದ್ದ Superhumans of Cringetopia ಎಂಬ ಖಾತೆಯಿಂದ ಮಾಡಿದ ಪೋಸ್ಟ್ ಅನ್ನು ಅನ್ನು ಇನ್ಸ್ಟಗ್ರಾಮ್‌ ಮರುಸ್ಥಾಪಿಸಿದೆ. 

  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರತಿಮೆಯನ್ನು ಪೂಜಿಸುತ್ತಿರುವ ವ್ಯಕ್ತಿಯನ್ನು ಗೇಲಿ ಮಾಡುವ ಪೋಸ್ಟ್ ಅನ್ನು ಮೆಟಾ (ಇನ್ಸ್ಟಗ್ರಾಮ್‌ ಮಾತೃಸಂಸ್ಥೆ) "ಮೌನವಾಗಿ ಮರುಸ್ಥಾಪಿಸಿದೆ" ಎಂದು ಟ್ವಿಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ.

ಯಾವುದೇ ನಗ್ನತೆಯನ್ನು ಚಿತ್ರಿಸದಿದ್ದರೂ ಸಹ Instagram ನ "ನಗ್ನತೆ ಮತ್ತು ಲೈಂಗಿಕ ವಿಷಯ" ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ Superhumans of Cringetopia ಎಂಬ ಖಾತೆಯಿಂದ ಮಾಡಿದ ಪೋಸ್ಟ್ ಅನ್ನು ಅಳಿಸಲಾಗಿತ್ತು.

ಮಾಳವೀಯ ಅವರ ನಿರ್ದೇಶನದ ಮೇರೆಗೆ ಮೆಟಾ ಸಂಸ್ಥೆ ಅದನ್ನು ತೆಗೆದುಹಾಕಿತ್ತು ಎಂದು ದಿ ವೈರ್ ವರದಿ ಮಾಡಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಪೋಸ್ಟ್‌ ಅನ್ನು ಮರುಸ್ಥಾಪಿಸಲಾಗಿದ್ದು, ವಿಡಂಬನಾತ್ಮಕ ಪೋಸ್ಟ್ ಅನ್ನು ಮರುಸ್ಥಾಪಿಸಿರುವ ಬಗ್ಗೆ ಮೆಟಾದ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News