ಕಾಂಗ್ರೆಸ್ ಅಧ್ಯಕ್ಷ ಚುನಾವಣೆ 'ಮುಕ್ತ, ನ್ಯಾಯೋಚಿತ'ವಾಗಿಲ್ಲ, ಅಕ್ರಮ ನಡೆದಿದೆ: ಶಶಿ ತರೂರ್ ಆರೋಪ
ಹೊಸದಿಲ್ಲಿ: ಸುಮಾರು 20 ವರ್ಷಗಳ ನಂತರ ಮೊದಲ ಬಾರಿ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಗ್ಗೆ ಆರಂಭವಾಗಿದ್ದು, ಚುನಾವಣೆಯಲ್ಲಿ "ಅಕ್ರಮಗಳು" ನಡೆದಿದೆ. ಚುನಾವಣೆ ಮುಕ್ತ ಹಾಗೂ ನ್ಯಾಯೋಚಿತವಾಗಿಲ್ಲ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ Shashi Tharoor ಆರೋಪಿಸಿದ್ದಾರೆ,
ಮತ ಎಣಿಕೆ ಆರಂಭವಾದ ಕೂಡಲೇ ತರೂರ್ ಅವರ ತಂಡವು ಹಲವಾರು "ಸಮಸ್ಯೆಗಳಿವೆ" ಎಂದು ಆರೋಪಿಸಿದೆ
"ನಾವು ಮಧುಸುದನ್ ಮಿಸ್ತ್ರಿ ಕಚೇರಿಯೊಂದಿಗೆ ನಿರಂತರ ಸಂವಹನದಲ್ಲಿದ್ದೇವೆ. ಅನೇಕ ವಿಭಿನ್ನ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ. ಆ ಕುರಿತು ನಮಗೆ ಇನ್ನೂ ಸರಿಯಾದ ಉತ್ತರ ಪಡೆಯಲು ಸಾಧ್ಯವಿಲ್ಲ" ಎಂದು ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೊಝ್ ಹೇಳಿದರು.
ಸೀಲ್ ಆಗಿರುವ ಮತದಾನ ಪೆಟ್ಟಿಗೆಗಳನ್ನು ದೇಶದ ವಿವಿಧೆಡೆಯಿಂದ ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಯಿತು. ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ 96 ರಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಗಾಂಧಿ ಕುಟುಂಬದ ದೀರ್ಘಕಾಲದ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ.