ಪರೋಲ್‌ ನಲ್ಲಿ ಹೊರಗಿದ್ದ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿ: ವರದಿ

Update: 2022-10-19 07:59 GMT
Photo: PTI

ಹೊಸದಿಲ್ಲಿ: ಗುಜರಾತ್‌ ನಲ್ಲಿ 2002ರಲ್ಲಿ ನಡೆದಿದ್ದ ಕೋಮು ಸಂಘರ್ಷದ(Gujarat riot-2002) ಸಂದರ್ಭದಲ್ಲಿ ಬಿಲ್ಕಿಸ್‌ ಬಾನು(bilkis bano) ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬಸ್ಥರನ್ನು ಕೊಂದು ಹಾಕಿದ್ದ 11 ಆರೋಪಿಗಳನ್ನು ಬಿಡುಗಡೆ ಮಾಡಿದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಗೃಹ ಸಚಿವಾಲಯವೇ ಅವರ ಬಿಡುಗಡೆಗೆ ಅನುಮೋದನೆ ನೀಡಿತ್ತು ಎಂದು ಗುಜರಾತ್‌ ಸರಕಾರ(gujarat government) ತಿಳಿಸಿತ್ತು. ಇದೀಗ ಈ ಅಪರಾಧಿಗಳ ಪೈಕಿ ಓರ್ವ ಪರೋಲ್‌ ವೇಳೆ ಬಿಡುಗಡೆಗೊಂಡಿದ್ದಾಗ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು ಎಂದು livelaw ವರದಿ ಮಾಡಿದೆ.

ಅಪರಾಧಿಗಳ ಪೈಕಿ ಮಿತೇಶ್‌ ಚಿಮನ್‌ಲಾಲ್‌ ಭಟ್‌(mithesh chimanlal bhat) ಎಂಬಾತ 2020ರ ಜೂನ್‌ ತಿಂಗಳಿನಲ್ಲಿ ಪೆರೋಲ್‌ ಮೂಲಕ ಹೊರ ಬಂದಿದ್ದ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸೆಕ್ಷನ್‌ 354IPC ಅನ್ವಯ ದೂರು ದಾಖಲಿಸಲಾಗಿತ್ತು. ಸುಪ್ರೀಂಕೋರ್ಟ್‌ ನಲ್ಲಿ ಗುಜರಾತ್‌ ಸರ್ಕಾರದ ಅಫಿಡವಿಟ್‌ ನಲ್ಲಿರುವ ಅನುಬಂಧದ ಪ್ರಕಾರ ಈ ವಿಚಾರಣೆಯು ಬಾಕಿ ಉಳಿದಿದೆ ಎಂದು ಅನುಬಂಧವನ್ನು ಉಲ್ಲೇಖಿಸಿ live law ವರದಿಯಲ್ಲಿ ತಿಳಿಸಿದೆ. 

ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಸುಪ್ರೀಂಕೋರ್ಟ್‌ ನಲ್ಲಿ ಮಂಗಳವಾರ ವಿಚಾರಣೆ ನಡೆದಿದ್ದು, ಸದ್ಯ ವಾದವಿವಾದಗಳನ್ನು ನವೆಂಬರ್‌ 29ಕ್ಕೆ ಮುಂದೂಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News