×
Ad

​ಬ್ರಹ್ಮಾವರ: ಬಸ್ಸಿನಲ್ಲಿ ಮಹಿಳೆಯ ಸರ ಕಳವು

Update: 2022-10-19 20:33 IST

ಬ್ರಹ್ಮಾವರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡಿರುವ ಘಟನೆ ಅ.18ರಂದು ಬೆಳಗ್ಗೆ ನಡೆದಿದೆ.

ಚಾಂತಾರು ಗ್ರಾಮದ ವಿದ್ಯಾನಗರ ನಿವಾಸಿ ಶೀನ ನಾಯ್ಕ ಎಂಬವರ ಪತ್ನಿ ರುಕ್ಮಿಣಿ ಬಾಯಿ(67) ಎಂಬವರು ವೇಗದೂತ ಬಸ್ಸಿನಲ್ಲಿ  ಹೊಸೂರು ಗ್ರಾಮದ ಕರ್ಜೆಗೆ ಪ್ರಯಾಣಿಸುತ್ತಿದ್ದು, ಈ ವೇಳೆ ಕಳ್ಳರು, ರುಕ್ಮಿಣಿ ಬಾಯಿ ಅವರ ಕುತ್ತಿಗೆ ಯಲ್ಲಿದ್ದ ಸುಮಾರು 32 ಗ್ರಾಂನ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿ ದ್ದಾರೆಂದು ದೂರಲಾಗಿದೆ. ಕಳವಾದ ಚಿನ್ನದ ಸರದ ಮೌಲ್ಯ 1,68,932 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News