ರಾಜಪಕ್ಸಗೆ ಸಮನ್ಸ್ ನೀಡಲು ಶ್ರೀಲಂಕಾ ಸುಪ್ರೀಂಕೋರ್ಟ್ ಆದೇಶ
ಕೊಲಂಬೊ, ಅ.19: ಮಾನವ ಹಕ್ಕು ಉಲ್ಲಂಘನೆಯ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸ(Gotabaya Rajapaksa)ಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ನೀಡುವಂತೆ ಶ್ರೀಲಂಕಾದ ಸುಪ್ರೀಂಕೋರ್ಟ್(Supreme Court of Sri Lanka) ಬುಧವಾರ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಉತ್ತರದ ಜಾಫ್ನಾ (North Jaffna)ಜಿಲ್ಲೆಯಲ್ಲಿ 2011ರಲ್ಲಿ ಮಾನವ ಹಕ್ಕು ಕಾರ್ಯಕರ್ತರಾದ ಲಲಿತ್ ವೀರರಾಜ್(Lalit Veeraj) ಮತ್ತು ಕುಗಾನ್ ಮುರುಗನಾಥನ್(Kugan Muruganathan) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ರಾಜಪಕ್ಸಗೆ ಸಮನ್ಸ್ ನೀಡಲಾಗಿದೆ. ಆ ಸಂದರ್ಭ ಗೊತಬಯ ಶ್ರೀಲಂಕಾ ರಕ್ಷಣಾ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರೆ ಅವರ ಸಹೋದರ ಮಹಿಂದಾ ರಾಜಪಕ್ಸ ಅಧ್ಯಕ್ಷರಾಗಿದ್ದರು.
ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹಾಜರಾಗುವಂತೆ 2018ರಲ್ಲಿ ಗೊತಬಯಗೆ ಸಮನ್ಸ್ ನೀಡಲಾಗಿತ್ತು. ಆದರೆ ಆಗ ಅವರು ಅಧ್ಯಕ್ಷರಾಗಿದ್ದರಿಂದ ಹಾಜರಾತಿಯಿಂದ ವಿನಾಯಿತಿ ಪಡೆದಿದ್ದರು. ಆದರೆ ಈಗ ಅಧ್ಯಕ್ಷ ಹುದ್ದೆ ಕಳೆದುಕೊಂಡಿರುವುದರಿಂದ ವಿನಾಯತಿಯನ್ನೂ ಕಳೆದುಕೊಂಡಿದ್ದಾರೆ.