ಡಾಲರ್‌ನೆದುರು ಮೊದಲ ಬಾರಿಗೆ 83ರ ಕೆಳಕ್ಕೆ ಕುಸಿದ ರೂಪಾಯಿ

Update: 2022-10-19 17:50 GMT

ಹೊಸದಿಲ್ಲಿ,ಅ.19: ವಿದೇಶಿ ಬಂಡವಾಳದ ಮುಂದುವರಿದ ಹೊರಹರಿವು ಮತ್ತು ವಿದೇಶಿ ಮಾರುಕಟ್ಟೆ(Foreign market)ಗಳಲ್ಲಿ ಡಾಲರ್‌ನ ಪ್ರಾಬಲ್ಯದ ನಡುವೆ ರೂಪಾಯಿಯು ಬುಧವಾರ 61 ಪೈಸೆಗಳನ್ನು ಕಳೆದುಕೊಂಡು ಮೊದಲ ಬಾರಿಗೆ 83ರ ಗಡಿಯಿಂದ ಕೆಳಕ್ಕೆ ಕುಸಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಕಚ್ಚಾತೈಲ ಬೆಲೆ(Crude oil price)ಗಳು ಮತ್ತು ಹೂಡಿಕೆದಾರರಲ್ಲಿಯ ಅಪಾಯ ವಿರೋಧಿ ಮನೋಭಾವವೂ ರೂಪಾಯಿ ಪತನಕ್ಕೆ ಕಾರಣವಾಗಿವೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದರು.

ಬುಧವಾರ ಬೆಳಿಗ್ಗೆ ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 82.32ರಲ್ಲಿ ಆರಂಭಗೊಂಡಿತ್ತಾದರೂ ನಂತರ ವೌಲ್ಯವನ್ನು ಕಳೆದುಕೊಳ್ಳುತ್ತ ಅಂತಿಮವಾಗಿ ಡಾಲರ್‌ನೆದುರು 83.01 (ತಾತ್ಕಾಲಿಕ)ರಲ್ಲಿ ಮುಕ್ತಾಯಗೊಂಡಿದೆ. ಮಂಗಳವಾರ ರೂಪಾಯಿ ಡಾಲರ್‌ನೆದುರು 10 ಪೈಸೆ ನಷ್ಟದೊಂದಿಗೆ 82.40ರಲ್ಲಿ ಮುಕ್ತಾಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News