×
Ad

ನಾಳೆ ರೋಝ್‌ಗಾರ್ ಮೇಳದಲ್ಲಿ ಪ್ರಧಾನಿಯಿಂದ 75 ಸಾವಿರ ನೇಮಕಾತಿ ಪತ್ರ ಹಸ್ತಾಂತರ

Update: 2022-10-20 22:14 IST

ಹೊಸದಿಲ್ಲಿ,ಅ. 20: ಹತ್ತು ಲಕ್ಷ ಜನರ ನೇಮಕಾತಿ ಪ್ರಕ್ರಿಯೆಯ ಬೃಹತ್ ‘ರೋಝ್‌ಗಾರ್ ಮೇಳ’ವನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಕ್ಟೋಬರ್ 22ರಂದು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದ ಸಂದರ್ಭ 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದು. ಅಲ್ಲದೆ, ಪ್ರಧಾನಿ ಅವರು ನೇಮಕರಾದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಅವರ ಕಚೇರಿ ಗುರುವಾರ ತಿಳಿಸಿದೆ.

ಯುವ ಜನರಿಗೆ ಉದ್ಯೋಗದ ಅವಕಾಶ ಒದಗಿಸುವ  ಹಾಗೂ ಪ್ರಜೆಗಳ ಕಲ್ಯಾಣದ ಖಾತರಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಬದ್ಧತೆಯನ್ನು ಪೂರೈಸುವತ್ತ ಇದು ಪ್ರಮುಖ ಹೆಜ್ಜೆ ಎಂದು ಹೇಳಿಕೆ ತಿಳಿಸಿದೆ.

ಪ್ರಧಾನಿ ಅವರ ನಿರ್ದೇಶನದಂತೆ ಎಲ್ಲ ಸಚಿವರು ಹಾಗೂ ಇಲಾಖೆಗಳು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಕಾರ್ಯ ನಿರ್ವಹಿಸಲಿದ್ದಾರೆ.   ದೇಶಾದ್ಯಂತ ನಡೆಯುವ ಈ ನೂತನ ನೇಮಕಾತಿ ಯೋಜನೆಯಲ್ಲಿ 38 ಸಚಿವರು ಹಾಗೂ ಭಾರತ ಸರಕಾರದ ಇಲಾಖೆಗಳು ಪಾಲ್ಗೊಳ್ಳಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News