×
Ad

ಅ.21: ‘ಯುನಿಟಿ ಬುರ್ಖಾ-ಯುನಿಟಿ ಫ್ಯಾಶನ್’ ಶುಭಾರಂಭ

Update: 2022-10-20 22:40 IST

ಮಂಗಳೂರು, ಅ.20: ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಹಾಲ್ ಗ್ರೌಂಡ್‌ನ ಕಟ್ಟಡದಲ್ಲಿ ತೆರೆಯಲಾದ ‘ಯುನಿಟಿ ಬುರ್ಖಾ’ (ಶ್ವಾಲ್ ಮತ್ತು ನಖಾಬ್) ಹಾಗೂ ‘ಯುನಿಟಿ ಫ್ಯಾಶನ್’ (ವಿಮೆನ್ಸ್ ವೇರ್) ಮಳಿಗೆಯು ಅ.21ರಂದು ಅಪರಾಹ್ನ 3ಕ್ಕೆ ಶುಭಾರಂಭಗೊಳ್ಳಲಿದೆ.

ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾತ್ಯತೀತ ಜನತಾದಳದ ರಾಜ್ಯ ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಭಾಗವಹಿಸಲಿದ್ದಾರೆ.

ನವೀನ ವಿನ್ಯಾಸದ ಬುರ್ಖಾ, ಶ್ವಾಲ್, ನಖಾಬ್, ಸಿದ್ಧ ಉಡುಪಿನ ಅಬಯಾಸ್, ಸ್ಟೂಡೆಂಟ್ ಅಬಯಾಸ್, ಟರ್ಕಿ ಶ್ವಾಲ್, ತಲೆವಸ್ತ್ರ, ಮಕ್ಕಾನಿ ಹಾಗೂ ಚೂಡಿದಾರ್ ಮೆಟೀರಿಯಲ್ಸ್ ಸಹಿತ ಮಹಿಳೆಯರ ಉಡುಪುಗಳು ಮಿತ ದರದಲ್ಲಿ ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ಎಲ್ಲಾ ವಸ್ತ್ರಗಳಿಗೆ ಶೇ.30ರಷ್ಟು ರಿಯಾಯಿತಿ ದರ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News