ಜಲಾಲ್‌ಬಾಗ್: ಮೀಲಾದ್ ಕಾರ್ಯಕ್ರಮ
ದೇರಳಕಟ್ಟೆ, ಅ.20: ಮಸ್ಜಿದುಲ್ ಮತ್ತು ಮದರಸತುಲ್ ಅರಫಾ ಜಲಾಲ್ ಬಾಗ್ ಇದರ ಆಶ್ರಯದಲ್ಲಿ ಹುಬ್ಬು ರ‌್ರಸೂಲ್ ಮತ್ತು ಮೀಲಾದ್ ಕಾರ್ಯಕ್ರಮವು ಜಮಾಅತ್‌ನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿಯ ಅಧ್ಯಕ್ಷತೆಯಲ್ಲಿ ಜರಗಿತು.
ಮದ್ರಸದ ಮುಅಲ್ಲಿಮ್ ಅಬೂಬಕ್ಕರ್ ದಾರಿಮಿ ಉರುಮಣೆ ದುಆಗೈದರು. ಖತೀಬ್ ಎಂ.ಕೆ. ಅಬ್ದುಲ್ ರಹ್ಮಾನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ತಲಪಾಡಿ ಬಿಸಿ ರೋಡ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಹಂಝ ಫೈಝಿ ಹುಬ್ಬುರ‌್ರಸೂಲ್ ಪ್ರಭಾಷಣಗೈದರು. ಮುಅಲ್ಲಿಮ್ ಎಂ.ಬಿ.ಅಬ್ದುಲ್ ಖಾದರರ ನೇತೃತ್ವದಲ್ಲಿ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೋಟೆಕಾರ್ ಪಟ್ಟಣ ಪಂಚಾಯಿತ್ ಮಾಜಿ ಸದಸ್ಯ ಡಿ.ಎಂ.ಮುಹಮ್ಮದ್, ಝಿರಾರ್ ಅಬ್ದುಲ್ಲಾ, ಅಬ್ದುಲ್ ರಝಾಕ್ ಮೂಸಾ, ಗ್ರೀನ್ ಗ್ರೌಂಡ್ ಮಸೀದಿಯ ಅಧ್ಯಕ್ಷ ಸೈಯ್ಯದಾಲಿ, ನಿವೃತ್ತ ಗ್ರಾಮ ಕರಣಿಕ ಅಬ್ದುಲ್ ಖಾದರ್, ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದ್ರಸದ ಮೇಲ್ವಿಚಾರಕ ಅಬ್ದುಲ್ ಲತೀಫ್ ಮತ್ತು ವಿಜಯನಗರ ಜುಮ್ಮಾ ಮಸೀದಿಯ ಸಹ ಖತೀಬ್ ಮುಹಮ್ಮದ್ ಮುಸ್ಲಿಯಾರ್ ಭಾಗವಹಿಸಿದ್ದರು.
ಜಮಾಅತಿನ ಉಪಾಧ್ಯಕ್ಷ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಮುಹಮ್ಮದ್ ಫಾರೂಕ್, ಕಾರ್ಯದರ್ಶಿ ಮುಹಮ್ಮದ್ ಅಲಿ ಹಾಜಿ, ಆಡಳಿತ ಸಮಿತಿ ಸದಸ್ಯರಾದ ಅಬೂಬಕ್ಕರ್ ಪಿ.ಕೆ, ಅಬ್ದುಲ್ ರಹ್ಮಾನ್ ಹಾಜಿ, ಅಬ್ದುಲ್ ಹಮೀದ್ ಡ್ರೈವರ್, ಆರೀಫ್ ಹುಸೈನ್ ಮತ್ತು ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಪೊಯ್ಯತ್ತಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಜಮಾಅತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ಸ್ವಾಗತಿಸಿದರು. ಮದ್ರಸದ ಮೇಲ್ವಿಚಾರಕ ಹಮೀದ್ ಪಜೀರ್ ವಂದಿಸಿದರು.