‘ಸಿಲ್ಲಿ ಸೋಲ್ಸ್’ ಕೆಫೆಯ ಮದ್ಯದ ಪರವಾನಗಿ ರದ್ದುಗೊಳಿಸಲು ಗೋವಾ ಅಬಕಾರಿ ಆಯುಕ್ತ ನಿರಾಕರಣೆ

Update: 2022-10-20 17:32 GMT
Silly Souls Cafe in Goa | Instagram/sillysoulsgoa

ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ರಾಜಕೀಯ ವಿವಾದದ ಕೇಂದ್ರವಾಗಿರುವ ಗೋವಾದ ʼಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ʼನ ಮದ್ಯದ ಪರವಾನಗಿಯನ್ನು ರದ್ದುಗೊಳಿಸಲು ಗೋವಾದ ಅಬಕಾರಿ ಆಯುಕ್ತರು ಗುರುವಾರ ನಿರಾಕರಿಸಿದ್ದಾರೆ ಎಂದು barandbench.com ವರದಿ ಮಾಡಿದೆ.

“ಮದ್ಯದ ಮೇಲಿನ ಅಬಕಾರಿಯು ಗೋವಾ ಸರ್ಕಾರದ ಪ್ರಮುಖ ಆದಾಯಗಳಲ್ಲಿ ಒಂದಾಗಿದೆ, ಪರವಾನಗಿ ರದ್ದುಗೊಳಿಸುವುದರಿಂದ ರಾಜ್ಯದ ಆದಾಯಕ್ಕೆ ಅಡ್ಡಿಯಾಗುತ್ತದೆ.” ಎಂದು ಕಮಿಷನರ್ ನಾರಾಯಣ್ ಎಂ ಗಡ್ ಹೇಳಿದ್ದಾರೆ.

 “ಸಣ್ಣಪುಟ್ಟ ವಿಷಯಗಳ ಮೇಲೆ ಮದ್ಯದ ಪರವಾನಗಿಯನ್ನು ಅಮಾನತುಗೊಳಿಸಿದರೆ ಅಥವಾ ರದ್ದುಗೊಳಿಸಿದರೆ, ಅದು ವ್ಯವಹಾರಕ್ಕೆ ಅಡ್ಡಿಯಾಗುವುದಲ್ಲದೆ ರಾಜ್ಯದ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಚಾಲನೆಯಲ್ಲಿರುವ ವ್ಯವಹಾರವನ್ನು ಇದ್ದಕ್ಕಿದ್ದಂತೆ ಮುಚ್ಚಲು ಅನುಮತಿಸಲಾಗುವುದಿಲ್ಲ." ಎಂದು ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಜುಲೈ 23 ರಂದು, ನ್ಯಾಯವಾದಿ ಐರಿಸ್ ರೋಡ್ರಿಗಸ್ ಅವರು ಸಲ್ಲಿಸಿದ ದೂರಿನ ಮೇರೆಗೆ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ಗೆ ಗ್ಯಾಡ್ ಶೋಕಾಸ್ ನೋಟಿಸ್ ನೀಡಿದ ನಂತರ ವಿವಾದ ಪ್ರಾರಂಭವಾಗಿದೆ.

ಕೆಫೆಯ ಮದ್ಯದ ಪರವಾನಗಿಯನ್ನು ಮುಂಬೈ ನಿವಾಸಿ ಆಂಥೋನಿ ದ್ಗಾಮಾ ಎಂದು ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಮೇ 17, 2021 ರಂದು ದ್ಗಾಮಾ ನಿಧನರಾಗಿದ್ದರೂ ಸಹ ಜೂನ್‌ನಲ್ಲಿ ಪರವಾನಗಿಯನ್ನು ನವೀಕರಿಸಲಾಗಿದೆ ಎಂದು ನೋಟಿಸ್‌ ನಲ್ಲಿ ತಿಳಿಸಲಾಗಿತ್ತು.

ಯೂಟ್ಯೂಬ್‌ ಚಾನೆಲ್‌ ಒಂದರ ಸಂದರ್ಶನದಲ್ಲಿ, ಸ್ಮೃತಿ ಇರಾನಿ ಪುತ್ರಿ ಜೋಯಿಶ್ ಇರಾನಿ ʼಸಿಲ್ಲಿ ಸೋಲ್ಸ್‌ʼ ಕೆಫೆ ತನ್ನದೇ ಎಂದು ಒಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News