ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜನಜಾಗೃತಿ ಜಾಥಾ ಸಮಾರೋಪ
ಮಂಗಳೂರು, ಅ.22: ದೇಶದ ಪ್ರಸಕ್ತ ಸಮಸ್ಯೆಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಮತ ರಾಜಕಾರಣದಂತಹ ಸಾಮಾಜಿಕ ಅರಾಜಕತೆಗೆ ಎದುರಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಕಲಬುರಗಿಯಿಂದ ಮಂಗಳೂರುವರೆಗಿನ ನಡೆಸಿದ ಜನ ಜಾಗೃತಿ ಜಾಥಾದ ಸಮಾರೋಪ ಕಾರ್ಯಕ್ರಮವು ಶುಕ್ರವಾರ ತೊಕ್ಕೊಟ್ಟಿನಲ್ಲಿ ನಡೆಯಿತು.
ಅದಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ನಡೆದ ಜಾಥಾವು ದೇರಳಕಟ್ಟೆ ಹಾಗೂ ಉಳ್ಳಾಲದ ಕೆಲವು ಪ್ರದೇಶಗಳಲ್ಲಿ ಸಂಚರಿಸಿ ಸಂಜೆ ತೊಕ್ಕೊಟ್ಟುವಿನಲ್ಲಿ ಸಮಾವೇಶಗೊಂಡಿತು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾಹ್ ಖಾನ್, ರಾಜ್ಯ ಕಾರ್ಯದರ್ಶಿ ಮುಜಾಹಿದ್ ಪಾಶಾ, ಪಕ್ಷದ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ದಿವಾಕರ್ ರಾವ್ ಬೋಳೂರು, ದ.ಕ. ಜಿಲ್ಲಾಧ್ಯಕ್ಷ ಅಡ್ವಕೇಟ್ ಸರ್ಫ್ರಾಃಝ್, ಜಿಲ್ಲಾ ವಕ್ತಾರ ಅರಫಾ ಮಂಚಿ, ಜಮೀಲಾ ಮಾತನಾಡಿದರು.