ಮಂಗಳೂರು: ಚಿನ್ನ ಅಕ್ರಮ ಸಾಗಾಟ ಪ್ರಕರಣ; ಐದು ಮಂದಿ ಸೆರೆ

Update: 2022-10-22 16:01 GMT

ಬಜ್ಪೆ, ಅ.22: ಅ.8ರಿಂದ ಅ.21ರ ವರೆಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಐವರನ್ನು ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ 1.59 ಕೋ. ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 3124.540 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಪ್ರಯಾಣಿಕರೆಲ್ಲರೂ ದುಬೈನಿಂದ ಬಂದಿದ್ದು, ಒಳಉಡುಪುಗಳ ಒಳಗೆ ಘನ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮರೆಮಾಚಿದ್ದರು. ಕೆಲವರು ಗುದನಾಳದಲ್ಲಿ ಮತ್ತು ಕೆಲವು ದ್ರಾವಣದಲ್ಲಿ ಅದ್ದಿದ ಟವೆಲ್‌ಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News