×
Ad

‘ಇದು ನನ್ನಿಂದ ಹೇಗೆ ಸಾಧ್ಯವಾಯಿತು ಎಂದು ಗೊತ್ತಿಲ್ಲ’: ಪಾಕ್ ವಿರುದ್ಧ ಅಮೋಘ ಪ್ರದರ್ಶನಕ್ಕೆ ಕೊಹ್ಲಿ ಪ್ರತಿಕ್ರಿಯೆ

Update: 2022-10-23 20:50 IST
ವಿರಾಟ್ ಕೊಹ್ಲಿ, Photo:PTI

ಮೆಲ್ಬೋರ್ನ್, ಅ.23: ವಿರಾಟ್ ಕೊಹ್ಲಿ ರವಿವಾರ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್‌ವೊಂದನ್ನು ಆಡಿ ಪಾಕಿಸ್ತಾನ ವಿರುದ್ಧ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿರುವ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.

  ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ‘‘ಇನಿಂಗ್ಸ್ ಬಳಿಕ ನನಗೆ ಪದಗಳೇ ಸಿಗುತ್ತಿಲ್ಲ. ಈ ಇನಿಂಗ್ಸ್ ಹೇಗೆ ಕಟ್ಟಿದೆ ಎಂದು ನನಗೆ ಗೊತ್ತಿಲ್ಲ. ತಂಡವು 31 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ತೀವ್ರ ಒತ್ತಡದಲ್ಲಿತ್ತು. ನಾನು ಹಾಗೂ ಹಾರ್ದಿಕ್ ಪಾಂಡ್ಯ ಇನಿಂಗ್ಸ್ ಆಧರಿಸಿದೆವು. ಹಾರಿಸ್ ಪಾಕ್‌ನ ಪ್ರಮುಖ ಬೌಲರ್. ಅವರ ಬೌಲಿಂಗ್‌ನಲ್ಲಿ ನಾನು ಆ ಎರಡು ಸಿಕ್ಸರ್ ಸಿಡಿಸಿದ್ದೆ. ತಂಡವನ್ನು ಗೆಲುವಿನ ಸನಿಹ ಕರೆದೊಯ್ದ್ದೆ. ಇಂದಿನ ತನಕ ಆಸ್ಟ್ರೇಲಿಯ ವಿರುದ್ಧ ಮೊಹಾಲಿಯ ನನ್ನ ಆಟ ಉತ್ತಮ ಇನಿಂಗ್ಸ್ ಆಗಿತ್ತು. ಇಂದು ನಾನು ಈ ಇನಿಂಗ್ಸ್‌ನ್ನು ಅತ್ಯುತ್ತಮ ಎಂದು ಪರಿಗಣಿಸುವೆ ’’ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ಕಳುಹಿಸಿರುವ ಕೊಹ್ಲಿ, ‘ಸ್ಟೇಡಿಯಂನಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ನೀವು(ಅಭಿಮಾನಿಗಳು)ನನ್ನನ್ನು ಬೆಂಬಲಿಸುತ್ತಿದ್ದೀರಿ. ನಿಮ್ಮ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News