ಹಾರ್ದಿಕ್ ಪಾಂಡ್ಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ
Update: 2022-10-23 21:08 IST
ಮೆಲ್ಬೋರ್ನ್, ಅ.23: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 1,000ಕ್ಕೂ ಅಧಿಕ ರನ್ ಹಾಗೂ 50 ವಿಕೆಟ್‌ಗಳನ್ನು ಗಳಿಸಿದ ಭಾರತದ ಮೊದಲ ಆಟಗಾರನೆಂಬ ಹಿರಿಮೆಯೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.
ರವಿವಾರ ಪಾಕಿಸ್ತಾನ ವಿರುದ್ಧ ಎಂಸಿಜಿಯಲ್ಲಿ ನಡೆದ ವಿಶ್ವಕಪ್‌ನ ಸೂಪರ್-12 ಪಂದ್ಯದ ವೇಳೆ ಪಾಂಡ್ಯ ಈ ಮೈಲಿಗಲ್ಲು ತಲುಪಿದ್ದಾರೆ.
ಪಾಂಡ್ಯ ಅವರು ಪಾಕ್‌ನ ಹೈದರ್ ಅಲಿ, ಶಾದಾಬ್ ಖಾನ್ ಹಾಗೂ ಮುಹಮ್ಮದ್ ನವಾಝ್ ವಿಕೆಟನ್ನು ಉರುಳಿಸಿದ್ದರು. ಪಾಕ್ ಅನ್ನು 8 ವಿಕೆಟಿಗೆ 159 ರನ್‌ಗೆ ನಿಯಂತ್ರಿಸಲು ನೆರವಾಗಿದ್ದರು. ಭಾರತವು ಬ್ಯಾಟಿಂಗ್‌ನಲ್ಲಿ ಸಂಕಷ್ಟದಲ್ಲಿದ್ದಾಗ ಕ್ರೀಸಿಗೆ ಇಳಿದಿರುವ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಗಳಿಸಿದರು. ಕೊಹ್ಲಿಯವರೊಂದಿಗೆ 113 ರನ್ ಜೊತೆಯಾಟ ನಡೆಸಿದರು.