ಖಿದ್ಮತುಲ್ ಅನಾಮ್ ಅಧ್ಯಕ್ಷರಾಗಿ ಮುಸ್ತಾಕ್ ಬೇಂಗ್ರೆ
Update: 2022-10-24 19:12 IST
ಪಡುಬಿದ್ರಿ: ಖಿದ್ಮತುಲ್ ಅನಾಮ್ ಅಸೋಸಿಯೇಷನ್ ಪಡುಬಿದ್ರಿ ಇದರ ಅಧ್ಯಕ್ಷರಾಗಿ ಮುಸ್ತಾಕ್ ಬೇಂಗ್ರೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಪಡುಬಿದ್ರಿ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಕೆ. ಮೊಹಿದ್ದೀನ್ ಲಚ್ಚಿಲ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಪ್ರಸ್ತುತ ಸಾಲಿನ ಮಹಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಗೌರವಾಧ್ಯಕ್ಷ ಅಕ್ಬರ್, ಉಪಧಕ್ಷ ಲಿಯಾಕತ್ ಅಲಿ ಮುನ್ನ, ಕಾರ್ಯದರ್ಶಿ ನೂರ್ ಮುಹಮ್ಮದ್ ಬೇಂಗ್ರೆ, ಕೋಶಾಧಿಕಾರಿ ರಿಯಾಝ್ ಮಜಲಕೋಡಿ, ಜೊತೆ ಕಾರ್ಯದರ್ಶಿ ಝಹೀರ್ ಬೇಂಗ್ರೆ. ಸಂಘಟನಾ ಕಾರ್ಯದರ್ಶಿಗಳಾಗಿ ಆಬಿದ್ ಬೇಂಗ್ರೆ, ಕೌಸರ್ ಬೇಂಗ್ರೆ, ಶರೀಫ್ ಮಿನ್ನ, ರಫೀಕ್ ಬೇಂಗ್ರೆ, ಜಸ್ಮೀರ್ ಕೇರಿ. ಸದಸ್ಯರಾಗಿ ಮಯ್ಯದ್ದಿ ಮಜಲಕೋಡಿ, ಭಾಷಾ ಬೇಂಗ್ರೆ, ರಮೀಝ್ ಬೇಂಗ್ರೆ, ಮುಖ್ತಾರ್ ಮುತ್ತ, ಆಸಿಫ್ ಬೇಂಗ್ರೆ, ರಿಯಾಝ್ ಬೇಂಗ್ರೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.