×
Ad

ವಿಶಿಷ್ಟ ರೀತಿಯಲ್ಲಿ ದೀಪಾವಳಿ ಅಚರಿಸಿದ ಅರುಣೋದಯ ಯುವಕಮಂಡಲ ಸದಸ್ಯರು

Update: 2022-10-25 20:19 IST

ಉಡುಪಿ, ಅ.25: ಕೊಡವೂರಿನ ಬಾಚನಬೈಲು  ಅರುಣೋದಯ ಯುವಕ ಮಂಡಲ ಈ ಬಾರಿಯ ದೀಪಾವಳಿ ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದೆ. ಸಂಘದ ಸದಸ್ಯರು ತಮ್ಮೂರಿನ  ಹಾಗೂ ಪರ ಊರಿನ ದಾನಿಗಳಿಂದ  ನಿಧಿ ಸಂಗ್ರಹಿಸಿ, ಲಕ್ಷ್ಮೀನಗರ ಬಳಿಯಿರುವ  ಪುಟಾಣಿ ಮಕ್ಕಳ ಕೇಂದ್ರವಾಗಿರುವ ‘ಮಮತೆಯ ತೊಟ್ಟಿಲು’ ಸಂಸ್ಥೆಗೆ ಅಗತ್ಯ ಇರುವ ಸಾಮಾಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಿದ ಮೊತ್ತದಿಂದ ಖರೀದಿಸಿ ನೀಡಿದರು.

ಈ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಅಚರಣೆ ಮಾಡುವ ಮೂಲಕ ಅರುಣೋದಯ ಸಂಘ ಇತರರಿಗೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಭಾಸ್ಕರ್ ಪಾಲನ್, ಅಧ್ಯಕ್ಷ ಭರತ್ ಭೂಷಣ್, ಕಾರ್ಯದರ್ಶಿ ದೀಪಕ್ ಶೆಟ್ಟಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News