ಎಐಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ: ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಸಂಭ್ರಮ ಆಚರಣೆ
ಮಂಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಸುರತ್ಕಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಮಾಜಿ ಕಾರ್ಪೊರೇಟರ್ ಎಸ್.ಅಪ್ಪಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಕೆ.ಕೆ. ಶಾಹುಲ್ ಹಮೀದ್, ಲಾರೆನ್ಸ್ ಡಿಸೋಜ, ಶುಭಾಷ್‌ಚಂದ್ರ ಶೆಟ್ಟಿ ಕೊಲ್ನಾಡು, ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿಗಳಾದ ಸಂತೋಷ್ ಶೆಟ್ಟಿ, ಶುಭೋದಯ ಆಳ್ವ, ನೀರಜ್‌ಚಂದ್ರ ಪಾಲ್, ಶಬ್ಬೀರ್ ಎಸ್, ಸಿ.ಎಂ. ಮುಸ್ತಫಾ, ಆರೀಫ್ ಬಾವ ಬಂದರ್, ಕಚೇರಿಯ ಕಾರ್ಯದರ್ಶಿ ನಝೀರ್ ಬಜಾಲ್, ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ, ಮುಹಮ್ಮದ್ ಕುಂಜತ್ತಬೈಲ್, ಮುಹಮ್ಮದ್ ಬಪ್ಪಳಿಗೆ, ಭುವನ್ ಕರ್ಕೇರ, ಪ್ರಶಾಂತ್ ಕುಲಾಲ್, ಖ್ವಾಜಾ ಮೊಯ್ದೀನ್ ಬೆಂಗ್ರೆ, ಯೋಗಿಶ್ ನಾಯಕ್, ಲಕ್ಷ್ಮಣ್ ಶೆಟ್ಟಿ, ರಾಬಿನ್, ಫಯಾಝ್ ಅಮ್ಮೆಮ್ಮಾರ್, ಸಂತೋಷ್ ಬಂಗೇರ, ನಜೀಬ್ ಮಂಚಿ ಮತ್ತಿತರರಿದ್ದರು.