ಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಮೃತ್ಯು, 12 ಮಂದಿಗೆ ಗಾಯ

Update: 2023-05-09 04:57 GMT
ಸಾಂದರ್ಭಿಕ ಚಿತ್ರ (PTI)

ಮುಂಬೈ: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ (blast) ಮೂವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ(Maharashtra) ಬೊಯಿಸಾರ್ ಎಂಬಲ್ಲಿ ನಡೆದಿದೆ.

ಕಾರ್ಖಾನೆಯಲ್ಲಿ ಬಾಯ್ಲರೊಂದು ಸ್ಫೋಟಗೊಂಡ ಪರಿಣಾಮ ಈ ಅನಾಹುತ ನಡೆದಿದೆ ಎನ್ನಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಮೇಲ್ಛಾವಣಿ ಕಿತ್ತು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಲಸಿಗ ಮುಸ್ಲಿಮರ ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡ ಎರಡು ದಿನದಲ್ಲೇ ಸೀಲ್ ಮಾಡಿ ಮುಚ್ಚಿದ ಅಸ್ಸಾಂ ಸರಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News