×
Ad

ಪುತ್ತೂರು ರೇಂಜ್ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

Update: 2022-10-27 10:05 IST

ಪುತ್ತೂರು : ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಪುತ್ತೂರು ರೇಂಜ್ ಇದರ ನೂತನ ಅಧ್ಯಕ್ಷರಾಗಿ ರಫೀಕ್ ಹಾಜಿ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಹಮೀದ್ ಖಂದಕ್ ಮಿತ್ತೂರು, ಕೋಶಾಧಿಕಾರಿಯಾಗಿ ಲವ್ಲಿ ಹಮೀದ್ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ ಪುತ್ತೂರಿನ ಕಲ್ಲೇಗ ಮದ್ರಸ ಹಾಲ್ ನಲ್ಲಿ  ನಡೆದ ರೇಂಜ್ ನ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಲ್ಲೆಗ ಜುಮಾ ಮಸೀದಿ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್ ಉದ್ಘಾಟಿಸಿದರು. ರೇಂಜ್ ಅಧ್ಯಕ್ಷ ರಫೀಕ್ ಹಾಜಿ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಹಮೀದ್ ಖಂದಕ್ ವರದಿ ಹಾಗೂ ಲೆಕ್ಕ ಪತ್ರವನ್ನು  ಮಂಡಿಸಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಮುಫತ್ತಿಸ್ ಮುಹಮ್ಮದ್ ದಾರಿಮಿ,  ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಹನೀಫ್ ದಾರಿಮಿ ನೆಕ್ಕಿಲಾಡಿ, ಪ್ರಧಾನ ಕಾರ್ಯದರ್ಶಿ ಬಶೀರ್ ದಾರಿಮಿ ಭಾಗವಹಿಸಿದ್ದರು. ಸುಮಾರು 26 ಮದ್ರಸ ಹಾಗೂ ಮಸೀದಿಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಇದೇ ವೇಳೆ 2022 - 25ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಚುನಾವಣಾ ವೀಕ್ಷಕರಾಗಿ ಆಗಮಿಸಿದ ತಾಜ್ ಮಹಮ್ಮದ್ ಸುಳ್ಯ ಹಾಗೂ ಹಕೀಂ ಪರ್ತಿಪ್ಪಾಡಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಉಪಾಧ್ಯಕ್ಷರುಗಳಾಗಿ ಬಶೀರ್ ಹಾಜಿ ಕೋಡಿಯಾಡಿ, ಎಂ.ಎಸ್. ಹಮೀದ್ ಪುಣಚ, ಕಾರ್ಯದರ್ಶಿ ಗಳಾಗಿ ಹಸೈನಾರ್ ಬನಾರಿ,  ರೋಯಲ್ ಮೊಹಮ್ಮದ್ ಶರೀಫ್, ಸಂಘಟನಾ ಕಾರ್ಯದರ್ಶಿಯಾಗಿ ನೌಷಾದ್ ಹಾಜಿ  ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಝೈನುದ್ದೀನ್ ಮತ್ತು ಅಝೀಝ್ ಬಪ್ಪಳಿಗೆ ಆಯ್ಕೆಯಾದರು. ಜಿಲ್ಲಾ ಕೌನ್ಸಿಲರ್ ಗಳಾಗಿ ಶರೀಫ್ ಸಾಲ್ಮರ ಹಾಗೂ ಸಕ್ಸಸ್ ಸಾಹುಲ್ ಹಮೀದ್ ಕುಕ್ಕರಬೆಟ್ಟು ಅವರನ್ನು ನೇಮಿಸಲಾಯಿತು.

Similar News