×
Ad

ದ್ವೇಷದ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷ ನಾಯಕ ಆಝಂ ಖಾನ್‍ರನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ

Update: 2022-10-27 16:54 IST

ಲಕ್ನೋ: ದ್ವೇಷದ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ (Azam Khan) ಅವರನ್ನು ದೋಷಿ ಎಂದು ಉತ್ತರ ಪ್ರದೇಶದ ರಾಮಪುರ್ ಎಂಬಲ್ಲಿನ ನ್ಯಾಯಾಲಯ ಘೋಷಿಸಿದೆ. ಅವರ ಶಿಕ್ಷೆಯ ಪ್ರಮಾಣ ಸದ್ಯದಲ್ಲಿಯೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. 2019 ರಲ್ಲಿ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (CM Adityanath) ಮತ್ತು ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟ್, ಐಎಎಸ್ ಅಧಿಕಾರಿ ಅಂಜನೇಯ ಕುಮಾರ್ ಸಿಂಗ್ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದರು ಎಂದು ಆರೋಪಿಸಲಾಗಿತ್ತು. ಅವರ ಭಾಷಣವು ಪ್ರಚೋದನಕಾರಿಯೂ ಆಗಿತ್ತು ಎಂದು ದೂರಲಾಗಿತ್ತು.

ಖಾನ್ ಅವರಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ಆಗಿದ್ದೇ ಆದಲ್ಲಿ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.

ವಂಚನೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಖಾನ್ ಅವರಿಗೆ ಕೆಲ ತಿಂಗಳುಗಳ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅವರು ಸುಮಾರು ಎರಡು ವರ್ಷ ಜೈಲಿನಲ್ಲಿ ಕಳೆದಿದ್ದರು.

ಭ್ರಷ್ಟಾಚಾರ, ಕಳ್ಳತನ ಪ್ರಕರಣಗಳು ಸೇರಿದಂತೆ ಸುಮಾರು 90 ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕರೆನ್ಸಿ ನೋಟಿನಲ್ಲಿ ಶಿವಾಜಿ ಫೋಟೊ ಎಡಿಟ್‌ ಮಾಡಿ, 'ಯೇ ಪರ್ಫೆಕ್ಟ್ ಹೈ' ಎಂದು ಹೇಳಿದ ಬಿಜೆಪಿ ಶಾಸಕ

Similar News