ಉತ್ತರ ಪ್ರದೇಶ: ಹೆಡ್ ಕಾನ್‍ಸ್ಟೇಬಲ್‌ಗೆ ತಂಡದಿಂದ ಹಲ್ಲೆ; ಕಾರಣವೇನು ಗೊತ್ತೇ ?

Update: 2022-10-28 02:46 GMT

ಲಕ್ನೋ: ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಎಳೆದಾಡಿದ್ದಾರೆ ಎನ್ನಲಾದ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಹೆಡ್ ಕಾನ್‍ಸ್ಟೇಬಲ್ ಒಬ್ಬರನ್ನು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದೆ.

ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಖ್ಯ ಪೇದೆಯನ್ನು ಬೈಯುತ್ತಾ ನಾಲ್ವರು ಹೊಡೆಯುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ.

"ಪರಾ ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಶ್ರೀಕಾಂತ್ ಅವರನ್ನು ಮೋಟರ್ ಸೈಕಲ್‍ನಲ್ಲಿ ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ನಾಲ್ವರು ತಡೆದಿದ್ದಾರೆ. ಬಳಿಕ ಪೊಲೀಸ್ ಮೇಲೆ ಹಲ್ಲೆ ನಡೆಸಿದರು" ಎಂದು ಡಿಸಿಪಿ ರಾಹುಲ್ ರಾಜ್ ಘಟನೆ ಬಗ್ಗೆ ವಿವರ ನೀಡಿದ್ದಾರೆ.

"ಪರಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಗುರುತಿಸಲಾಗಿದೆ. ಅವರ ಪತ್ತೆಗೆ ಪ್ರಯತ್ನಗಳು ಮಂದುವರಿದಿವೆ" ಎಂದು ಅವರು ಹೇಳಿದ್ದಾರೆ. ಈ ndtv.com ವರದಿ ಮಾಡಿದೆ.

Similar News