ಮುಂಬೈ: ಪತ್ನಿಗೆ ಕಾರು ಡಿಕ್ಕಿ ಹೊಡೆಸಿದ ಚಿತ್ರ ನಿರ್ಮಾಪಕನ ಬಂಧನ

Update: 2022-10-28 05:21 GMT

ಮುಂಬೈ: ವಾಹನವೊಂದರಲ್ಲಿ  ಪರ ಸ್ತ್ರಿಯೊಂದಿಗೆ ಸಿಕ್ಕಿಬಿದ್ದ ಚಿತ್ರ ನಿರ್ಮಾಪಕ  ಕಮಲ್ ಕಿಶೋರ್ ಮಿಶ್ರಾನನ್ನು  ತನ್ನ ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 19 ರಂದು ಅಂಧೇರಿ (ಪಶ್ಚಿಮ) ದಲ್ಲಿರುವ ದಂಪತಿಗಳ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ.  ಮಿಶ್ರಾ ಅವರ ಪತ್ನಿ ತನ್ನ ಪತಿ  ಕಾರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಇರುವುದನ್ನು ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿ ಚಿತ್ರ 'ದೇಹತಿ ಡಿಸ್ಕೋ' ನಿರ್ಮಾಪಕ ಕಮಲ್ ಮಿಶ್ರಾ ವಿರುದ್ಧ ಅವರ ಪತ್ನಿ ಗುರುವಾರ ದೂರು ನೀಡಿದ ನಂತರ ಆತನ ಮನೆಯಿಂದ ಅಂಬೋಲಿ ಪೊಲೀಸ್ ಠಾಣೆಗೆ ಕರೆದೊಯ್ದರು.

ಶುಕ್ರವಾರ ಮುಂಜಾನೆ ಈ ಪ್ರಕರಣದಲ್ಲಿ ಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಮಲ್ ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ತನ್ನ ಕಾರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಪತಿಯನ್ನು ಕಂಡರು. ಚಿತ್ರ ನಿರ್ಮಾಪಕನ ಪತ್ನಿ ಆತನ ಬಳಿ ಹೋದಾಗ, ಆತ ಸ್ಥಳದಿಂದ ತಪ್ಪಿಸಿಕೊಳ್ಳಲು ಕಾರನ್ನು ಚಲಾಯಿಸಿದ ಹಾಗೂ ಈ ವೇಳೆ  ಆತನ ಪತ್ನಿಗೆ ಕಾರು ಡಿಕ್ಕಿ ಹೊಡೆದಿದ್ದು, ಮಹಿಳೆಯ ಕಾಲು, ಕೈ ಮತ್ತು ತಲೆಗೆ ಗಾಯಗಳಾಗಿವೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

Similar News