×
Ad

ನರೇಂದ್ರ ಮೋದಿ ದೇಶ ಭಕ್ತ: ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಶಂಸೆ

Update: 2022-10-28 11:24 IST

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಮಾಸ್ಕೋ ಮೂಲದ ಚಿಂತಕರ ಚಾವಡಿ ‘ವಾಲ್ಡೈ’ ಚರ್ಚಾ ಕ್ಲಬ್‌ ನಲ್ಲಿ  ವಾರ್ಷಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು.  ಭಾರತದಲ್ಲಿ ಮೋದಿ  ನಾಯಕತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.  ಅವರೊಬ್ಬ ದೇಶಭಕ್ತ ಎಂದು ಕೊಂಡಾಡಿದ್ದಾರೆ.

"ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಹಳಷ್ಟು ಕೆಲಸಗಳಾಗಿವೆ. ಅವರ 'ಮೇಕ್ ಇನ್ ಇಂಡಿಯಾ' ಕಲ್ಪನೆಯು ಆರ್ಥಿಕವಾಗಿ ಮತ್ತು ನೈತಿಕವಾಗಿ ಮುಖ್ಯವಾಗಿದೆ. ಭವಿಷ್ಯವು ಭಾರತದ್ದಾಗಿರಲಿದ್ದು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದು ಕ್ರೆಮ್ಲಿನ್ ವಾಲ್ಡೈ ಡಿಸ್ಕಷನ್ ಕ್ಲಬ್‌ನಲ್ಲಿ ಹೇಳಿದರು.

ಬ್ರಿಟಿಷ್ ವಸಾಹತುಶಾಹಿಯಿಂದ ಈಗಿನ ಆಧುನಿಕ ರಾಷ್ಟ್ರವಾಗಿರುವ ಭಾರತ ತನ್ನ ಅಭಿವೃದ್ಧಿ ಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಸುಮಾರು 150 ಕೋಟಿ  ಜನರು ಮತ್ತು ಖಚಿತವಾದ ಅಭಿವೃದ್ಧಿ ಫಲಿತಾಂಶಗಳು ಭಾರತದ ಬಗ್ಗೆ ಪ್ರತಿಯೊಬ್ಬರೂ  ಗೌರವ ಹಾಗೂ ಹೆಮ್ಮೆಪಡುವಂತೆ ಮಾಡಿದೆ ಎಂದು ಪುಟಿನ್  ಹೇಳಿದರು.

Similar News