ಇರಾನ್ ನಲ್ಲಿ ಮುಂದುವರಿದ ಆಡಳಿತ ವಿರೋಧಿ ಪ್ರತಿಭಟನೆ: ಆಸ್ಪತ್ರೆ ಆವರಣದಲ್ಲಿ ಭದ್ರತಾ ಸಿಬ್ಬಂದಿಯಿಂದ ಗುಂಡು ಹಾರಾಟ

ನಾರ್ವೆಯ ಮಾನವಹಕ್ಕುಗಳ ಸಂಘಟನೆ ಆರೋಪ

Update: 2022-10-29 15:48 GMT

ಟೆಹರಾನ್,ಅ.29: ಇರಾನ್ (Iran)ನಲ್ಲಿ ಮಹ್ಸಾ ಅಮಿನಿಯ ಸಾವಿನ ವಿರುದ್ಧ ಭುಗಿಲೆದ್ದ ಪ್ರತಿಭಟನೆ ಏಳನೇ ವಾರಕ್ಕೆ ಕಾಲಿಟ್ಟಿರುವಂತೆಯೇ ಇರಾನಿನ ಭದ್ರತಾಪಡೆಗಳು ದಿವಾನ್ದರೆಹ್ ನಗರ(Diwandareh city)ದ ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳ ವಸತಿಗೃಹದ ಮೇಲೆ ದಾಳಿ ನಡೆಸಿರುವುದಾಗಿ ನಾರ್ವೆ (Norway)ಮೂಲದ ಮಾನವಹಕ್ಕುಗಳ ಸಂಘಟನೆಯೊಂದು ಶನಿವಾರ ಆರೋಪಿಸಿದೆ.

   ಸೆಪ್ಟೆಂಬರ್ 19ರಂದು ದಿದಿವಾನ್‌ದರೆಹ್‌ನ ನಡೆದ ಆಡಳಿತ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು 28 ವರ್ಷ ವಯಸ್ಸಿನ ಮೊಹ್ಸಿನ್ ಮೊಹಮ್ಮದಿ ಎಂಬಾತನಿಗೆ ಗುಂಡಿಕ್ಕಿದ್ದರು. ಆತ ಮಾರನೆಯ ದಿನವೇ ಸನಾದಾಜ್ ನಗರದಲ್ಲಿರುವ ಕೌಸರ್ ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದನು.

       ಈ ಗಲಭೆಯಲ್ಲಿ ಗಾಯಗೊಂಡಿದ್ದ ಅಶ್ಕಾನ್ ಮರ್ವಾಟಿ ಎಂಬಾತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಶುಕ್ರವಾರ ಆತನನ್ನು ಬಂಧಿಸಲು ಆಗಮಿಸಿದ ಭದ್ರತಾಪಡೆಗಳನ್ನು ಆಸ್ಪತ್ರೆಯ ಆವರಣದಲ್ಲಿ ್ದ ಪ್ರತಿಭಟನಕಾರರ ಗುಂಪೊಂದು ತಡೆದಿತ್ತ್ತು. ಆಗ ಅವರ ಮೇಲೆ ಭದ್ರತಾಸಿಬ್ಬಂದಿ ಗುಂಡು ಹಾರಿಸಿರುವುದಾಗಿ ನಾರ್ವೆ ಮೂಲದ ಮಾನವಹಕ್ಕುಗಳ ಸಂಘಟನೆ ‘ಹೆಂಗಾವ್ ರೈಟ್ಸ್ ಗ್ರೂಪ್’ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಆನಂತರ ಅದೇ ಭದ್ರತಾಸಿಬ್ಬಂದಿ ಸಮೀಪದಲ್ಲಿರುವ ಖುರ್ದಿಸ್ತಾನ್ ವೈದ್ಯಕೀಯ ವಿಜ್ಞಾನ ವಿವಿಗೆ ಸೇರಿದ ವಿದ್ಯಾರ್ಥಿಗಳ ವಸತಿಗೃಹದ ಮೇಲೆಯೂ ದಾಳಿ ನಡೆಸಿದ್ದಾಗಿ ಹೆಂಗಾವ್ ತಿಳಿಸಿದೆ.

   ಮಹ್ಸಾ ಅಮಿನಿ ಸಾವಿನ ವಿರುದ್ಧ ಶುಕ್ರವಾರ ಟೆಹರಾನ್‌ನ ಚಿತ್‌ಗಾರ್ ವಸತಿಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಉದ್ರಿಕ್ತ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

  ಟೆಹರಾನ್‌ನಲ್ಲಿರುವ ವಿವಿಧ ವಿವಿಗಳಲ್ಲಿಯೂ ಮಹ್ಸಾ ಅಮಿನಿಯ ಸಾವಿನ ವಿರುದ್ಧ ಪ್ರತಿಭಟನೆಗಳು ಶನಿವಾರ ಮುಂದುವರಿದಿವೆ. ದಕ್ಷಿಣ ಇರಾನ್‌ನ ನಗರವಾದ ಕೆರ್ಮಾನ್ ಹಾಗೂ ಪಶ್ಚಿಮದ ಕೆರ್ಮಾನ್ ಶಾ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿರುವುದಾಗಿ ವರದಿಯಾಗಿದೆ.

Similar News