×
Ad

ದೇರಳಕಟ್ಟೆ: ಹುಬ್ಬುರ್ರಸೂಲ್ ಪ್ರವಚನ, ಶಂಸುಲ್ ಉಲಮಾ ಅನುಸ್ಮರಣೆ ಮಜ್ಲಿಸ್

Update: 2022-10-30 12:55 IST

ದೇರಳಕಟ್ಟೆ, ಅ.30: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ ಹುಬ್ಬುರ್ರಸೂಲ್ ಪ್ರವಚನ, ಬುರ್ದಾ ಮಜ್ಲಿಸ್ ಹಾಗೂ ಶಂಸುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಮರ್ಹೂಂ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಉದ್ಘಾಟಿಸಿದರು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ ಶಂಸುಲ್ ಉಲಮಾ ಅನುಸ್ಮರಣಾ ಪ್ರವಚನ ನೀಡಿದರು. ಹಾಜಿ ಅಬ್ದುರ್ರಹ್ಮಾನ್ ಪನೀರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಗೊಂಡ ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಕೋಶಾಧಿಕಾರಿಯಾಗಿ ಆಯ್ಕೆಗೊಂಡಿರುವ ಸೈಯದ್ ಅಮೀರ್ ತಂಙಳ್ ರನ್ನು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು.

 ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಹಾಗೂ ಬೆಳ್ಮ ಗ್ರಾಪಂ ಅಧ್ಯಕ್ಷ ಸಿ.ಎಂ.ಅಬ್ದುಲ್ ಸತ್ತಾರ್ ಮಾತನಾಡಿ ಶುಭ ಹಾರೈಸಿದರು.

ಶೌಕತಲಿ ಮುಸ್ಲಿಯಾರ್ ವೆಲ್ಲಮುಂಡ ಹುಬ್ಬುರ್ರಸೂಲ್ ಪ್ರವಚನ ನೀಡಿದರು. ಅಸ್ಸೈಯದ್ ಅಕ್ರಂ ಅಲಿ ತಂಙಳ್ ಸಮಾರೋಪ ಪ್ರಾರ್ಥನಾ ಮಜ್ಲಿಸ್ ಗೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳನಗರದ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಮುದರ್ರಿಸ್ ಹನೀಫ್ ದಾರಿಮಿ, ಹಯಾತುಲ್ ಇಸ್ಲಾಂ ಮದ್ರಸದ ಸದರ್ ಅಬ್ದುಲ್ಲಾ ಫೈಝಿ, ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ಕಿನ್ಯ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಬೂಬಕರ್ ರಿಯಾಝ್ ರಹ್ಮಾನಿ, ಕಿನ್ಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಸ್ಮಾಯೀಲ್, ಎಸ್.ವೈ.ಎಸ್. ದೇರಳಕಟ್ಟೆ ಶಾಖೆಯ ಉಪಾಧ್ಯಕ್ಷ ಮುಹಮ್ಮದ್ ಪನೀರ್, ಉಳ್ಳಾಲ ಸೈಯದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಎಸ್.ವೈ.ಎಸ್. ಮುಖಂಡರಾದ ಮುಹಮ್ಮದ್ ನಡುಪದವು, ಅಬುಸ್ವಾಲಿಹ್ ಹಾಜಿ ದೇರಳಕಟ್ಟೆ, ಮೂಸಬ್ಬ ಬಾಳೆಹೊನ್ನೂರ್, ಬೆಳ್ಮ ಗ್ರಾಪಂ ಸದಸ್ಯ ಇಕ್ಬಾಲ್ ಎಚ್.ಆರ್., ಇಬ್ರಾಹೀಂ ಬದ್ಯಾರ್, ಹನೀಫ್ ಬದ್ಯಾರ್, ಹಯಾತುಲ್ ಇಸ್ಲಾಂ ಮದ್ರಸ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶ್ರಫ್ ಡಿ.ಎ. ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ಚೆಯರ್ಮ್ಯಾನ್ ಸಮೀರ್ ಎಚ್.ಕಲ್ ಮತ್ತಿತರರು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿದರು. ದೇರಳಕಟ್ಟೆ ಶಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನ್ಸೀದ್ ವಂದಿಸಿದರು.

Similar News