'ಹೆಡ್ ಬುಷ್' ಸಿನಿಮಾದ ಪ್ರಚಾರಕ್ಕಾಗಿ ಸಾರ್ವಜನಿಕರಿಗೆ ಅಡ್ಡಿ ಆರೋಪ: ಐವರ ವಿರುದ್ಧ ಎಫ್‍ಐಆರ್

Update: 2022-10-30 14:49 GMT

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ (Head Bush) ಸಿನಿಮಾದ ಪ್ರಚಾರಕ್ಕಾಗಿ ಸಾರ್ವಜನಿಕರಿಗೆ ಅಡ್ಡಿ ಉಂಟು ಮಾಡಿದ ಆರೋಪದಡಿ ಐವರ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದೆ.

ರವಿವಾರ ಬೆಳಗ್ಗೆ ವಿಧಾನಸೌಧದ ಮೆಟ್ರೋನಿಲ್ದಾಣದ ರಸ್ತೆ ಮಧ್ಯೆ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.

ಐದಕ್ಕಿಂತ ಹೆಚ್ಚು ಜನರ ತಂಡವನ್ನು ಕಟ್ಟಿಕೊಂಡು 'ಹೆಡ್ ಬುಷ್' ಚಿತ್ರದ ಬಗ್ಗೆ ಕೂಗಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. 

ಇದನ್ನೂ ಓದಿ: ಬಲಪಂಥೀಯರಿಂದ ಮತ್ತೊಂದು ಸಂಸ್ಥೆ ಬಹಿಷ್ಕಾರಕ್ಕೆ ಅಭಿಯಾನ: ಈ ಬಾರಿ ʼಕ್ಯಾಡ್ಬರಿʼ ಗುರಿ.!

Similar News