ಹಾಜಬ್ಬ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ AH ತುಂಬೆ ಆಯ್ಕೆ

Update: 2022-11-01 05:36 GMT

ಮಂಗಳೂರು: ದಿವಂಗತ ಹಾಜಬ್ಬ ತುಂಬೆ ಇವರ ಸ್ಮರಣಾರ್ಥ ಅವರ ಕುಟುಂಬಸ್ಥರು ಹಾಜಬ್ಬ ಮೆಮೋರಿಯಲ್ ಟ್ರಸ್ಟ್ ಅನ್ನು ಸ್ಥಾಪಿಸಿ ಕಳೆದ 3 ವರ್ಷಗಳಿಂದ ಕುಟುಂಬದ ಮಕ್ಕಳ ವಿದ್ಯಾಭ್ಯಾಸ ಹಾಗೂ ಇತರ ಸಾಮಾಜಿಕ ವೈದ್ಯಕೀಯ ಸವಲತ್ತುಗಳನ್ನು ಒದಗಿಸುತ್ತಾ ಬಂದಿದ್ದು, ಇದೀಗ ಮೂರನೇ ವರ್ಷದ ತರವಾಡು ಕೂಡುಕೆಟ್ ಸಮಾರಂಭವು ಇತ್ತೀಚೆಗೆ ತರವಾಡಿನ ಮನೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ 2022-23ನೇ ಸಾಲಿಗೆ ಹಾಜಬ್ಬ ಮೆಮೋರಿಯಲ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ತುಂಬೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹೈದರ್ ತುಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್ ತುಂಬೆ, ಜತೆ ಕಾರ್ಯದರ್ಶಿಯಾಗಿ ಅನ್ಸಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ತುಂಬೆ, ಸದಸ್ಯರಾಗಿ ಅಬ್ದುಲ್ ರಜಾಕ್, ಹಸನ್ ಕುಂಞ, ಮುಹಮ್ಮದ್(ಮಮ್ಮು) ಮತ್ತು  ಶಕೀಲ್ ತುಂಬೆ  ಆಯ್ಕೆಯಾದರು.

Similar News