×
Ad

ಪಾವೆಂ ಆಚಾರ್ಯರದು ಕ್ರಾಂತಿಕಾರಿ ಮನಸ್ಸು: ಲಕ್ಷ್ಮೀಶ ತೋಳ್ಪಾಡಿ

Update: 2022-11-01 19:35 IST

ಉಡುಪಿ: ಕನ್ನಡ ಮನಸ್ಸುಗಳನ್ನು ಬೆಳೆಸುವ ಮನೋವಿಕಾಸದ ಕೆಲಸ ವನ್ನು ಮಾಡಿದವರು ಹಿರಿಯ ಪತ್ರಕರ್ತ ದಿವಂಗತ ಪಾವೆಂ ಆಚಾರ್ಯರು. ವಿಸ್ತಾರವಾದ ಮತ್ತು ಆಳವಾದ ಒಳನೋಟದ ಓದು ಪಾವೆಂಗೆ ಸಾಧ್ಯವಾಗಿತ್ತು. ಆದ್ದರಿಂದಲೇ ಅವರು ಕಸ್ತೂರಿಯನ್ನು ಆ ಕಾಲದಲ್ಲಿ ಮನೆ ಮಾತಾಗಿಸಿದರು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಮತ್ತು ಪಾವೆಂ ಆಚಾರ್ಯ ಟ್ರಸ್ಟ್ ಬೆಂಗಳೂರು ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಆಯೋಜಿಸಲಾದ ಪಾವೆಂ ಆಚಾರ್ಯ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅವರೊಳಗೊಂದು  ಕ್ರಾಂತಿಯ ಕಿಡಿ ಇತ್ತು. ಅದು ಸುಪ್ತವಾಗಿ ಕೊನೆತನಕವು ಇತ್ತು. ಧಾರವಾಡದಲ್ಲಿ ಬೇಂದ್ರೆ ಹತ್ತಿರ ಇದ್ರೂ ಅವರು ಶಂಬಾ ಜೋಶಿ ಯವರಿಗೆ ತುಂಬಾ ಹತ್ತಿರವಾಗಿದ್ದರು. ಅವರ ಅಂತರಂಗ ಬಲ್ಲವರಾ ಗಿದ್ದರು. ಅವರದು ಅಹಂಕಾರದ ಉದ್ದೀಪನದಿಂದ ಬೆಳೆದ ವ್ಯಕ್ತಿತ್ವ ಆಗಿರಲಿಲ್ಲ. ಬದಲಿಗೆ ಬದುಕಿನ ವಿಪರ್ಯಾಸದ ಅರಿವಿನಿಂದ ಬೆಳೆದ ಬೌದ್ಧಿಕ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಹೇಳಿದರು.  

ಪಾವೆಂ ಆಚಾರ್ಯ ಟ್ರಸ್ಟ್‌ನ ಛಾಯಾ ಉಪಾಧ್ಯಾಯ, ಅಭಿನವ ಪ್ರಕಾಶನದ ರವಿಕುಮಾರ್ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಮಣ್ಯ ಜೋಶಿ ವಂದಿಸಿದರು. ಜೊತೆ ಕಾರ್ಯದರ್ಶಿ ಜಿಪಿ ಪ್ರಭಾಕರ್ ತುಮರಿ ಕಾರ್ಯಕ್ರಮ ನಿರೂಪಿಸಿದರು.

Similar News