ದ.ಕ.ಜಿಲ್ಲಾ ಯುವ ಜೆಡಿಎಸ್‌ನಿಂದ ರಾಜ್ಯೋತ್ಸವ
Update: 2022-11-01 21:11 IST
ಮಂಗಳೂರು, ನ.1: ದ.ಕ.ಜಿಲ್ಲಾ ಯುವ ಜನತಾ ದಳದ ವತಿಯಿಂದ ನಗರದ ಕೊಟ್ಟಾರ ಚೌಕಿಯಲ್ಲಿರುವ ಯುವ ಜನತಾದಳ ಕಚೇಯಲ್ಲಿ ಕನ್ನಡ ಬಾವುಟ ಹಾರಿಸುವುದರೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಯುವ ಜನತಾದಳ ದ.ಕ.ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ದ್ವಜಾರೋಹಣಗೈದರು ಮಾತನಾಡಿದರು.
ಈ ಸಂದರ್ಭ ಯುವ ಜನತಾದಳದ ಹಿರಿಯ ಉಪಾಧ್ಯಕ್ಷ ಮುಹಮ್ಮದ್ ಆಸೀಫ್, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತ್ತಾರ್ ಬಂದರ್, ವಿದ್ಯಾರ್ಥಿ ಜನತಾದಳದ ಮಾಜಿ ಜಿಲ್ಲಾಧ್ಯಕ್ಷ ಸಿನಾನ್, ಮಂಗಳೂರು ದಕ್ಷಿಣ ಕ್ಷೇತ್ರದ ಮಹಾಪ್ರಧಾನ ಕಾರ್ಯದರ್ಶಿ ಸುಮಿತ್ ಸುವರ್ಣ, ಮಂಗಳೂರು ಉತ್ತರ ಕ್ಷೇತ್ರದ ಮಹಾಪ್ರದಾನ ಕಾರ್ಯದರ್ಶಿ ರಹೀಮ್ ಮಲ್ಲೂರು, ನಿತೀಶ್ ಪೂಜಾರಿ, ರಿನೀತ್ ಎನ್. ಪೂಜಾರಿ, ಧನುಷ್, ವಿನೀತ್ ಪೂಜಾರಿ, ಪ್ರದೀಪ್, ಸೌರವ್ ಪೂಜಾರಿ, ನಿಶಾಂತ್ ಪೂಜಾರಿ, ಜಯದೀಪ್, ಕಾರ್ತಿಕ್ ಪೂಜಾರಿ ಉಪಸ್ಥಿತರಿದ್ದರು..