ಕುದ್ರೋಳಿ: ಅಧ್ಯಯನ ಕೇಂದ್ರ ಉದ್ಘಾಟನೆ
Update: 2022-11-01 21:12 IST
ಮಂಗಳೂರು, ನ.1: ಎಸ್‌ಐಒ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ಘಟಕದ ವತಿಯಿಂದ ಕುದ್ರೋಳಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರವನ್ನು ರವಿವಾರ ಉದ್ಘಾಟಿಸಲಾಯಿತು.
ಶಾಂತಿ ಪ್ರಕಾಶದನ ಅಧ್ಯಕ್ಷ ಕೆ.ಎಂ. ಶರೀಫ್ ಗ್ರಂಥಾಲಯ ಹಾಗೂ ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸರ್ಫರಾಝ್ ಜೆ. ಹಾಶಿಮ್ ಉದ್ಘಾಟಿಸಿದರು.
ಕಾರ್ಪೊರೇಟರ್ ಶಂಶುದ್ದೀನ್, ಜೆಐಎಚ್ ಕುದ್ರೋಳಿ ಘಟಕದ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಎಸ್‌ಐಒ ಕುದ್ರೋಳಿ ಘಟಕದ ಅಧ್ಯಕ್ಷ ಮುಝಹಿರ್ ಅಹ್ಮದ್, ಎಸ್‌ಐಒ ನಗರಾಧ್ಯಕ್ಷ ಸಲ್ಮಾನ್ ಮೊಯಿದ್ದೀನ್, ಜಿಐಒ ದ.ಜ.ಜಿಲ್ಲಾ ಜೊತೆ ಕಾರ್ಯದರ್ಶಿ ಹಿಬಾ ಫಾತಿಮಾ, ರಾಜ್ಯ ಕಾರ್ಯದರ್ಶಿ ಆಮಿನಾ ಮುಶೀರಾ, ಕುದ್ರೋಳಿ ವರ್ತುಲ ಸಂಚಾಲಕಿ ಹಲೀಮಾ ಆಲಿಯಾ, ಹಂಝ ಉಪಸ್ಥಿತರಿದ್ದರು.
ಜೆಐಎಚ್ ಮಂಗಳೂರು ಘಟಕದ ಅಧ್ಯಕ್ಷ ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ನಿಯಾಫ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.