ಉತ್ತರಪ್ರದೇಶ: ರೈಲು ಹಳಿ ಪಕ್ಕದಲ್ಲಿ ಇಬ್ಬರು ಬಾಲಕರ ಶವಗಳು ಪತ್ತೆ
Update: 2022-11-01 23:55 IST
ಬಾರಾಬಂಕಿ (ಉ.ಪ್ರ.), ನ.1: ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ರೈಲು ಹಳಿಯ ಪಕ್ಕದಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂಡೌಲಿ ಗ್ರಾಮದ ಸಾತ್ರಿಕ್ ಪ್ರದೇಶದಲ್ಲಿ ಈ ಶವಗಳು ಪತ್ತೆಯಾಗಿವೆ. ಮಕ್ಕಳು ಆಟವಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿರಬೇಕೆಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಅವರು ಹೇಳಿದ್ದಾರೆ.
ಮೃತ ಪುಟಾಣಿಗಳನ್ನು 10 ವರ್ಷದ ಆಕಾಶ್ ಹಾಗೂ 9 ವರ್ಷದ ಆಯುಷ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿರುವುದಾಗಿ ಸಾತ್ರಿಖ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ತಿಳಿಸಿದ್ದಾರೆ.