ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಶೂಟರ್!

Update: 2022-11-03 16:03 GMT

ಇಸ್ಲಾಮಾಬಾದ್:‌ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಿದ ವ್ಯಕ್ತಿ, ತನ್ನ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದು, ಇಮ್ರಾನ್‌ ಖಾನ್‌ ರನ್ನು ಕೊಲ್ಲಲೆಂದೇ ಉದ್ದೇಶಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

"ಸಿರ್ಫ್ ಇಮ್ರಾನ್ ಖಾನ್ ಕೋ ಮಾರ್ನಾ ಥಾ (ನಾನು ಇಮ್ರಾನ್ ಖಾನ್ ಅವರನ್ನು ಮಾತ್ರ ಕೊಲ್ಲಲು ಬಂದಿದ್ದೇನೆ)" ಎಂದು ಶೂಟರ್ ಹೇಳಿರುವುದಾಗಿ ndtv.com ವರದಿ ಮಾಡಿದೆ.

ಅವರು (ಇಮ್ರಾನ್‌ ಖಾನ್)‌ ಜನರ ಹಾದಿ ತಪ್ಪಿಸುತ್ತಿದ್ದಾರೆ, ಅದಕ್ಕಾಗಿ ಕೊಲ್ಲಲು ಬಯಸಿದ್ದೇನೆ ಎಂದು ಶೂಟರ್‌ ಹೇಳಿದ್ದಾನೆ.

ಇಮ್ರಾನ್‌ ಖಾನ್‌ ಮೇಲೆ ದಾಳಿ ಮಾಡಿದವರಲ್ಲಿ ಇಬ್ಬರು ಶೂಟರ್‌ಗಳು ಇದ್ದರು ಎಂದು ವರದಿಗಳು ಹೇಳಿದ್ದು, ಒಬ್ಬ ಪಿಸ್ತೂಲ್ ಮತ್ತು ಒಂದು ಸ್ವಯಂಚಾಲಿತ ರೈಫಲ್ ಹೊಂದಿದ್ದ ಎಂದು ವರದಿಯಾಗಿದೆ.

ಈ  ಕೃತ್ಯವನ್ನು ಎಸಗಲು ತನ್ನನ್ನು ಯಾರೂ ಪ್ರೇರೇಪಿಸಿಲ್ಲವೆಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಅಲ್ಲದೆ ತಾನೊಬ್ಬನೇ ದಾಳಿಯನ್ನು ನಡೆಸಿದ್ದಾಗಿಯೂ ಆತ ತಿಳಿಸಿದ್ದಾನೆ. ವಝೀರಾಬಾದ್ಗೆ ತಾನು ಬೈಕ್ನಲ್ಲಿ ಆಗಮಿಸಿದ್ದು,  ಬಳಿಕ ವಾಹನವನ್ನು ತನ್ನ  ಚಿಕ್ಕಪ್ಪನ ಅಂಗಡಿಯಲ್ಲಿ ಬಿಟ್ಟು ಬಂದಿರುವುದಾಗಿ ಆತ ಹೇಳಿದ್ದಾನೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬಲಗಾಲಿಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Similar News