ಇಸ್ರೇಲ್ ಚುನಾವಣೆ: ಬೆಂಜಮಿನ್ ನೆತನ್ಯಾಹುಗೆ ಭರ್ಜರಿ ಗೆಲುವು

Update: 2022-11-03 18:27 GMT

ಜೆರುಸಲೇಂ, ನ.3: ಇಸ್ರೇಲ್‌ನಲ್ಲಿ ಈ ವಾರ ನಡೆದ ಚುನಾವಣೆಯ ಮತ ಎಣಿಕೆ ಬಹುತೇಕ ಅಂತ್ಯಗೊಂಡಿದ್ದು ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. 90ಶೇ.ಕ್ಕೂ ಅಧಿಕ ಮತ ಎಣಿಕೆ ಮುಕ್ತಾಯಗೊಂಡಿದ್ದು ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷ ಮತ್ತು ಸಂಪ್ರದಾಯವಾದಿ ಯೆಹೂದಿಗಳ ಒಕ್ಕೂಟಗಳ ಮೈತ್ರಿಕೂಟ ‘ರಿಲೀಜಿಯಸ್ ಝಿಯೋನಿಸಂ’ ('Religious Zionism')120 ಸದಸ್ಯ ಬಲದ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

ಅಂತಿಮ ಸುತ್ತಿನ ಮತ ಎಣಿಕೆಯ ಬಳಿಕ ಉಸ್ತುವಾರಿ ಪ್ರಧಾನಿ ಹಾಗೂ ‘ಯೆಷ್ ಅಟಿಡ್ (‘Yes atid)ಪಕ್ಷದ ನಾಯಕ ಯಾಸಿರ್ ಲ್ಯಾಪಿಡ್ (Yasir Lapid)ಸೋಲೊಪ್ಪಿಕೊಂಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಬೆಂಜಮಿನ್ ನೆತನ್ಯಾಹು ಅವರನ್ನು ಅಭಿನಂದಿಸಿದ್ದಾರೆ.

Similar News