×
Ad

ಕೆಮ್ಮಾರ: ಶಂಸುಲ್ ಉಲಮಾ ಅನುಸ್ಮರಣೆ

Update: 2022-11-04 21:42 IST

ಕೆಮ್ಮಾರ : ಸಮಸ್ತ ಉಲಮಾ ಒಕ್ಕೂಟದ ಶಿಲ್ಪಿಶಂಸುಲ್ ಉಲಮಾ ಮತ್ತು ಅಗಲಿದ ಉಲಮಾ-ಉಮರಾಗಳ ಅನುಸ್ಮರಣೆ, ಮೌಲಾನ ಅಜ್ಜಿಕಟ್ಟೆ ಆದಂ ದಾರಿಮಿ ರಚಿಸಿದ ಶಂಸುಲ್ ಉಲಮಾ ಮೌಲಿದ್ ಗ್ರಂಥ ಬಿಡುಗಡೆ ಹಾಗೂ ಸಮಸ್ತದ ಕೇಂದ್ರೀಯ ಮುಶಾವರ ಸದಸ್ಯರಾಗಿ ಆಯ್ಕೆಗೊಂಡ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಶೈಖುನಾ  ಉಸ್ಮಾನ್ ಫೈಝಿಗೆ ಸನ್ಮಾನ ಕಾರ್ಯಕ್ರಮವು ಕೆಮ್ಮಾರ ಶಕ್ತಿನಗರದ ಶಂಸುಲ್ ಉಲಮಾ ಮೆಮೋರಿಯಲ್ ದಅವಾ ಶರೀಅತ್ ಕಾಲೇಜಿನಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಅಧ್ಯಕ್ಷತೆ ವಹಿಸಿದರು. ಮೌಲಾನ ಅಜ್ಜಿಕಟ್ಟೆ ಆದಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷ ಎಲ್‌ಟಿ ರಝಾಕ್ ಹಾಜಿ ಪುತ್ತೂರು, ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ, ಬಶೀರ್ ಹಾಜಿ ದಾರಂದಕುಕ್ಕು, ಬದ್ರುದ್ದೀನ್ ಹೇಂತಾರ್, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್  ರಶೀದ್ ಹಾಜಿ ಪರ್ಲಡ್ಕ, ರಹ್ಮತುಲ್ಲಾ ಹಾಜಿ ಪಾಟ್ರಕೋಡಿ, ಹಸೈನಾರ್ ಹಾಜಿ ಕೊಯಿಲ, ಎನ್. ಇಸಾಕ್ ಕೆಮ್ಮಾರ, ಹನೀಫ್ ದಾರಿಮಿ ಸವಣೂರು, ಎನ್. ಇಸ್ಮಾಯಿಲ್ ಕೆಮ್ಮಾರ, ಹನೀಫ್ ದಾರಿಮಿ ನೆಕ್ಕಿಲಾಡಿ, ಅಬ್ದುಲ್ ರಝಾಕ್ ದಾರಿಮಿ ಮೇನಾಲ, ಬಾಅಸನಿ ಕೆಮ್ಮಾರ ಉಪಸ್ಥಿತರಿದ್ದರು.

ಮ್ಯಾನೇಜರ್ ಕೆಎಂಎ ಕೊಡುಂಗಾಯಿ ಸ್ವಾಗತಿಸಿದರು. ಯೂನಿಕ್ ಅಬ್ದುಲ್ ರಹ್ಮಾನ್ ವಂದಿಸಿದರು.

Similar News