×
Ad

ಯುವತಿ ನಾಪತ್ತೆ

Update: 2022-11-04 21:44 IST

ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧುಶ್ರೀ (19) ಎಂಬಾಕೆ  ನ.2ರಂದು ಕಾಣೆಯಾದ ಬಗ್ಗೆ ಆಕೆಯ ತಾಯಿ ಮಮತಾ ಎಂಬವರು ಬಂದರ್ ಠಾಣೆಗೆ ದೂರು ನೀಡಿದ್ದಾರೆ.

ಸುಮಾರು ಒಂದೂವರೆ ತಿಂಗಳಿನಿಂದ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈಕೆ ನ.2ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮನೆಯಿಂದ ಹೋಗಿದ್ದು, ಅಂದು ಮಧ್ಯಾಹ್ನ ಯಾರನ್ನೋ ನೋಡಲು ಹೋಗಿ ಬರುತ್ತೇನೆ ಎಂದು ಅಂಗಡಿಯಲ್ಲಿ ಇರುವವರ ಬಳಿ ಹೇಳಿ ಹೋಗಿದ್ದು ಬಳಿಕ ಅಂಗಡಿಗೂ ಮರಳದೆ, ಮನೆಗೂ ಬಾರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Similar News