ಹಳದಿ ಎಲೆರೋಗಕ್ಕೆ ಪರಿಹಾರದ ಜವಾಬ್ದಾರಿ ಅಧ್ಯಯನ ಸಮಿತಿಗೆ ವಹಿಸಲು ಕ್ಯಾಂಪ್ಕೊ ಒತ್ತಾಯ
Update: 2022-11-05 18:40 IST
ಮಂಗಳೂರು : ಹಳದಿ ಎಲೆರೋಗಕ್ಕೆ ಪರಿಹಾರದ ಜವಾಬ್ದಾರಿಯನ್ನು ಅಧ್ಯಯನ ಸಮಿತಿಗೆ ವಹಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಒತ್ತಾಯಿಸಿದ್ದಾರೆ.
ಕ್ಯಾಂಪ್ಕೊ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಅಡಿಕೆಯ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ನಗರದ ಖಾಸಗಿ ಹೊಟೇಲಿನಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ರೋಗಕ್ಕೆ ಶೀಘ್ರ ಔಷಧಿ ಕಂಡುಹಿಡಿದು ರೋಗದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವ ಜವಾಬ್ದಾರಿಯನ್ನು ಕೇಂದ್ರದಿಂದ ನೇಮಿಸಲ್ಪಟ್ಟ ಅಧ್ಯಯನ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕ್ಯಾಂಪ್ಕೊ ಈಗಾಗಲೇ ಅಡಿಕೆ ಆಮದಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಆ ಮನವಿಗೆ ಸಕರಾತ್ಮಕವಾಗಿ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.