×
Ad

ದೈವ ನರ್ತಕರಿಗೆ ಮಾಶಾಸನ ವಿಚಾರ: ಮಾಜಿ ಸಚಿವೆ ಲಲಿತಾ ನಾಯಕ್ ಹೇಳಿಕೆಗೆ ಯು.ಟಿ.ಖಾದರ್ ಆಕ್ಷೇಪ

Update: 2022-11-05 21:40 IST

ಮಂಗಳೂರು : ರಾಜ್ಯ ಸರಕಾರವು ದೈವ ನರ್ತಕರಿಗೆ ಘೋಷಿಸಿರುವ ಮಾಶಾಸನದ ಕುರಿತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ನೀಡಿರುವ ಹೇಳಿಕೆಗೆ ಮಾಜಿ ಸಚಿವ, ಶಾಸಕ, ರಾಜ್ಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯು.ಟಿ.ಖಾದರ್ ‘ಬಿ.ಟಿ. ಲಲಿತಾ ನಾಯಕ್ ಅವರೇ, ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ನಿಮ್ಮ ಮಾತನ್ನು ಒಪ್ಪಲು ನಾನು ಸಿದ್ಧನಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು’ ಎಂದು ಪ್ರತಿಕ್ರಿಯಿಸಿದ್ದಾರೆ.

Similar News