ಜಿಸಿಸಿ ಕಾಂಗ್ರೆಸ್ ಕನ್ನಡಿಗರು ಯುಎಇ ಘಟಕ: ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್‌ಗೆ ಸನ್ಮಾನ

Update: 2022-11-05 16:42 GMT

ದುಬೈ: ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು  ಸಮಾಜಕ್ಕೆ ಕೊಟ್ಟ ಅಪ್ರತಿಮ ಕೊಡುಗೆಯನ್ನು ಗೌರವಿಸಿ ಜಿಸಿಸಿ ಕಾಂಗ್ರೆಸ್ ಕನ್ನಡಿಗರು ಯುಎಇ ಘಟಕದ ವತಿಯಿಂದ ದುಬೈಯ ರೆಸ್ಟೋರೆಂಟ್‌ನಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಹಮ್ಮದ್ ಮಸೂದ್ ಹಾಜಿ ಜಿಸಿಸಿ ಕಾಂಗ್ರೆಸ್ ಘಟಕದ ಸಮಾಜಮುಖಿ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಯೋಜಕ ಫರ್ವೇಝ್ ಜಿಕೆ ಗೂಡಿನಬಳಿ ಸ್ವಾಗತಿಸಿದರು. ರಹಿಮಾನ್ ಸಜಿಪ ಸ್ಮರಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಮೂಸಾ ಪೆರುವಾಯಿ, ಅಶ್ರಫ್ ಸತ್ತಿಕಲ್, ಶಾರೂಕ್ ಪರ್ಲಿಯಾ, ಹನೀಫ್ ಮಜಲು, ರಫೀಕ್ ಸತ್ತಿಕಲ್, ಮುಝಮ್ಮಿಲ್ ಕುಲಶೇಖರ್, ಝೈನುದ್ದೀನ್ ಎಸ್‌ಎಂ ಉಪಸ್ಥಿತರಿದ್ದರು

Similar News