×
Ad

ಕುಸ್ತಿ ಸ್ಪರ್ಧೆ: ಬೈಕಂಪಾಡಿ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Update: 2022-11-05 22:16 IST

ಮಂಗಳೂರು : ನಗರ ಹೊರವಲಯದ ಬೈಕಂಪಾಡಿ ಮೀನಕಳಿಯ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ. ಬಡ ಕಾರ್ಮಿಕ ಕುಟುಂಬದ ಇಲ್ಲಿನ ವಿದ್ಯಾರ್ಥಿಗಳು 14 ಮತ್ತು 17 ವರ್ಷ ವಯೋಮಾನದ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯ 14 ಮತ್ತು 17 ವರ್ಷ ವಯೋಮಾನದ ವಿಭಾಗದಲ್ಲಿ  ಕುಮಾರ ಲಕ್ಷ್ಮಪ್ಪ ತಳ್ಯಾಳ, ದೇವರಾಜ ಲಕ್ಷ್ಮಪ್ಪ ಗೊಂದೆಪನ್ನವರ್,  ಅರುಣ್ ವಿಜಯ ಕುಮಾರ್, ರಾಜ ಲಕ್ಷ್ಮ್ಮಣ ತಳ್ಯಾಳ,  ಕೃಷ್ಣ ರಮೇಶ ಮಾದರ, ಸೃಜನ್ ಕುಮಾರ್, ಬಾಲರಾಜ ಮಾರುತಿ ಮಡ್ಡಿ ಮತ್ತು ಮಂಜುನಾಥ ಕಾಕಪ್ಪ ಭಾಗವಹಿಸಿದ್ದರು.

Similar News