‘ವಂದೇ ಮಾತರಂ’ಗೆ ರಾಷ್ಟ್ರಗೀತೆಯದ್ದೇ ಸ್ಥಾನ: ಕೇಂದ್ರ ಸರಕಾರ

Update: 2022-11-05 17:27 GMT

ಹೊಸದಿಲ್ಲಿ, ನ. 5: ರಾಷ್ಟ್ರಗೀತೆ ‘ಜನಗಣ ಮನ’ ('People's Mind')ಮತ್ತು ರಾಷ್ಟ್ರೀಯ ಹಾಡು ‘ವಂದೇ ಮಾತರಂ’('Vande Mataram') ಸಮಾನ ಸ್ಥಾನವನ್ನು ಹೊಂದಿವೆ ಹಾಗೂ ನಾಗರಿಕರು ಎರಡು ಹಾಡುಗಳಿಗೂ ಸಮಾನ ಗೌರವವನ್ನು ಕೊಡಬೇಕು ಎಂದು ಕೇಂದ್ರ ಸರಕಾರ(Central Govt) ದಿಲ್ಲಿ ಹೈಕೋರ್ಟ್ (High Court of Delhi)ಗೆ ಹೇಳಿದೆ.


‘‘ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ್ನು ಹಾಡುವ ಮತ್ತು ನುಡಿಸುವ ವಿಷಯದಲ್ಲಿ ರಾಷ್ಟ್ರಗೀತೆಯಂತೆ ದಂಡನಾತ್ಮಕ ಅಂಶಗಳು ಅಥವಾ ಅಧಿಕೃತ ಸೂಚನೆಗಳಿಲ್ಲದಿದ್ದರೂ, ಈ ಹಾಡು ಭಾರತೀಯರ ಭಾವನೆಗಳು ಮತ್ತು ಮನಸ್ಸುಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ ಹಾಗೂ ಹಾಡಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ’’ ಎಂದು ಕೇಂದ್ರ ಸರಕಾರ ಹೇಳಿದೆ.

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿ ಸಲ್ಲಿಸಲಾಗಿರುವ ಅಫಿದಾವಿತ್ನಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ‘ವಂದೇ ಮಾತರಂ’ ಹಾಡಿಗೆ ರಾಷ್ಟ್ರಗೀತೆಗೆ ನೀಡುವಷ್ಟೇ ಗೌರವ ಮತ್ತು ಸಮಾನ ಸ್ಥಾನವನ್ನು ನೀಡುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಅಶ್ವಿನಿ ಕುಮಾರ್ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.

Similar News