×
Ad

ಉಡುಪಿ ಜಿಲ್ಲಾಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆ

Update: 2022-11-06 19:00 IST

ಉಡುಪಿ: ಹೆಬ್ರಿ ಚಾಣಕ್ಯ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ವಾಯ್ಸ್ ಆಫ್ ಚಾಣಕ್ಯ -2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರ ದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸೃಷ್ಟಿ ಸಂಗೀತ ತರಬೇತಿ ಕೇಂದ್ರದ ಆಡಳಿತ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು. ಚಿತ್ರಕಲಾ ಶಿಕ್ಷಕ ರಮೇಶ್ ಕಿದಿಯೂರು, ತೀರ್ಪು ಗಾರರಾದ ಸಂಗೀತ ಶಿಕ್ಷಕಿ ಸ್ವಾತಿ ಭಟ್ ಉಡುಪಿ, ಜಯಶ್ರೀ ಕೋಟ್ಯಾನ್  ಕಟಪಾಡಿ, ಸೃಷ್ಟಿ ಫೌಂಡೇಶನ್‌ನ ಅಧ್ಯಕ್ಷೆ ಪ್ರಿತಿ ಪಿ.ಸುವರ್ಣ, ಎಸ್‌ಪಿ ಮ್ಯೂಸಿಕ್ ನ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಸಾದ್ ಹೆಬ್ರಿ ಕಾರ್ಯಕ್ರಮ ನಿರೂಪಿಸಿದರು. ಚಾಣಕ್ಯ ಸಂಸ್ಥೆಯ ಉಪನ್ಯಾಸಕಿ ಶತಾ ಶೆಟ್ಟಿ ವಂದಿಸಿದರು.

ಉಡುಪಿ ಜಿಲ್ಲೆಯ ಸುಮಾರು 40 ಮಿಕ್ಕಿ ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಆಯ್ಕೆಯಾದವರು  ಸೆಮಿ ಫೈನಲ್ ಹಾಗೂ ಸೆಮಿಫೈನಲ್ ಆಯ್ಕೆಯಾದವರಿಗೆ ಫೈನಲ್ ನಲ್ಲಿ ಹಾಡಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಪ್ರಥಮ 7777 ರೂ., ದ್ವಿತೀಯ ೪೪೪೪ರೂ. ಹಾಗೂ ತೃತೀಯ 2222ರೂ. ನಗದು ಬಹು ಮಾನ ಮತ್ತು ಟ್ರೋಫಿ ಮತ್ತು ಪ್ರಮಾಣಪತ್ರ ಹಾಗೂ ಮೂವರು ಉತ್ತಮ ಗಾಯಕರಿಗೆ ಸಮಾಧಾನಕರ ಬಹುಮಾನವಾಗಿ ತಲಾ 1111ರೂ. ನಗದು ನೀಡಲಾಗುವುದು ಎಂದು ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ತಿಳಿಸಿದರು.

Similar News