ವಿವಾಹಿತ ಮಹಿಳೆ ನಾಪತ್ತೆ

Update: 2022-11-06 14:52 GMT

ಕೊಲ್ಲೂರು : ಜಡ್ಕಲ್ ಗ್ರಾಮದ ವಾಟೆಗುಂಡಿ ನಿವಾಸಿ ಚಂದ್ರ ಎಂಬವರ ಪತ್ನಿ ವಿನುತಾ (29) ಎಂಬವರು ನ.5ರಂದು ಸಂಜೆ ಮನೆಯಿಂದ ಯಾರಿಗೂ ಹೇಳದೇ ಹೋದವರು ಈತನಕ ವಾಪಾಸ್ಸು ಬಾರದೇ ನಾಪತ್ತೆ ಯಾಗಿದ್ದಾರೆ.

4.8 ಅಡಿ ಎತ್ತರ, ಬಿಳಿ ಮೈಬಣ್ಣ, ಕೋಲು ಮುಖ, ಸಾದಾರಣಾ ಶರೀರ, ಕಪ್ಪುತಲೆ ಕೂದಲು ಹೊಂದಿರುವ ಇವರು, ನೀಲಿ ಬಿಳಿ ಪಟ್ಟಿ ಇರುವ ಮುಕ್ಕಾಲು ನೈಟ್ ಪ್ಯಾಂಟ್ ಹಾಗೂ ಬೂದಿ ಬಣ್ಣದ ಟಿಶರ್ಟ್ ಧರಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News