ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಹಿರಿಯ ನಾಯಕ ಅಬ್ದುಲ್ ಖಾದರ್ ನಿಧನ
Update: 2022-11-08 17:20 IST
ಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಹಿರಿಯ ನಾಯಕ, ಕಂದಕ ಬದ್ರಿಯಾ ಹೋಟೇಲ್ ಮಾಲಕ, ಕಾಟಿಪಳ್ಳ ನಿವಾಸಿ ಅಬ್ದುಲ್ ಖಾದರ್ (80) ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರು ನಗರ ಮುಸ್ಲಿಂ ಲೀಗ್ ಕಾರ್ಯಕಲಾಪಗಳಲ್ಲಿ ಸಕ್ರೀಯವಾಗಿದ್ದ ಅವರು ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸಿದ್ದರು. ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಸಂತಾಪ ವ್ಯಕ್ತಪಡಿಸಿದೆ.
ರಾಜ್ಯ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಎ ಇಬ್ರಾಹಿಂ ಅಹ್ಮದ್ ಜೋಕಟ್ಟೆ, ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆಎಂ ಫಯಾಝ್, ಪ್ರಧಾನ ಕಾರ್ಯದರ್ಶಿ ಟಿಯು ಇಸ್ಮಾಯಿಲ್, ನ್ಯಾಯವಾದಿ ಎಸ್ ಸುಲೈಮಾನ್ ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ, ಐದು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.