×
Ad

ಉಡುಪಿ ಜಿಲ್ಲೆಯ ಅಲ್ಲಲ್ಲಿ ವಿದ್ಯುತ್ ಅದಾಲತ್

Update: 2022-11-08 20:05 IST

ಉಡುಪಿ, ನ.8: ಮೆಸ್ಕಾಂನ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್‌ನ್ನು ಅಲ್ಲಲ್ಲಿ ಹಮ್ಮಿಕೊಳ್ಳ್ಳಲಾಗಿದೆ. 

ನ.19ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆ, ಕಾಪು ತಾಲೂಕಿನ ಕಟ್ಟಿಂಗೇರಿ ಮತ್ತು ಪಿಲಾರು, ಕಾರ್ಕಳ ತಾಲೂಕಿನ ಮುಡಾರು ಮತ್ತು ಬೋಳ, ಕುಂದಾಪುರ ತಾಲೂಕಿನ ಬಡಾಕೆರೆ, ಹಾರ್ದಳ್ಳಿ-ಮಂಡಳ್ಳಿ ಮತ್ತು ಹೊಂಬಾಡಿ-ಮಂಡಾಡಿ, ಬೈಂದೂರು ತಾಲೂಕಿನ ಹೊಸೂರು ಹಾಗೂ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಮತ್ತು ಯಡ್ತಾಡಿಯಲ್ಲಿ ಅದಾಲತ್ ನಡೆಯಲಿದೆ.

ಡಿಸೆಂಬರ್ 17ರಂದು ಹೆಬ್ರಿ ತಾಲೂಕಿನ ಬೆಳೆಂಜೆ, ಕಾಪು ತಾಲೂಕಿನ ಆತ್ರಾಡಿ ಮತ್ತು ಕುರ್ಕಾಲು, ಕಾರ್ಕಳ ತಾಲೂಕಿನ ಪಳ್ಳಿ ಮತ್ತು ಮಿಯ್ಯಾರು, ಕುಂದಾಪುರ ತಾಲೂಕಿನ ಕನ್ಯಾನ, ಹೆಂಗವಳ್ಳಿ ಮತ್ತು ತೆಕ್ಕಟ್ಟೆ, ಬೈಂದೂರು ತಾಲೂಕಿನ ಕೆರ್ಗಾಲ್ ಹಾಗೂ ಬ್ರಹ್ಮಾವರ ತಾಲೂಕಿನ ಕಚ್ಚೂರು ಮತ್ತು ಕಾವಡಿಯಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.

ಜನವರಿ 21ರಂದು ಕಾಪು ತಾಲೂಕಿನ ಅಲೆವೂರು ಮತ್ತು ನಂದಿಕೂರು, ಕಾರ್ಕಳ ತಾಲೂಕಿನ ಶಿರ್ಲಾಲು, ಕುಕ್ಕುಂದೂರು ಮತ್ತು ಮುಲ್ಲಡ್ಕ, ಕುಂದಾಪುರ ತಾಲೂಕಿನ ತ್ರಾಸಿ, ಶಂಕರನಾರಾಯಣ ಮತ್ತು ಕೋಣಿ, ಬೈಂದೂರು ತಾಲೂಕಿನ ಉಳ್ಳೂರು ಮತ್ತು ಬ್ರಹ್ಮಾವರ ತಾಲೂಕಿನ ಹಾರಾಡಿ ಮತ್ತು ಅಚ್ಲಾಡಿಯಲ್ಲಿ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 

Similar News