ಶಿಕ್ಷಣ ಲಾಭ ಗಳಿಸಲು ಇರುವ ಉದ್ಯಮವಲ್ಲ: ಸುಪ್ರೀಂಕೋರ್ಟ್

Update: 2022-11-08 17:27 GMT

ಹೊಸದಿಲ್ಲಿ: ಶಿಕ್ಷಣವು education ಲಾಭ ಗಳಿಸಲು ಮಾಡುವ ಉದ್ಯಮವಲ್ಲ ಹಾಗೂ ಬೋಧನಾ ಶುಲ್ಕವು ಯಾವತ್ತೂ ಜನಸಾಮಾನ್ಯರು ಭರಿಸಲು ಸಾಧ್ಯವಾಗುವಂತೆ ಇರಬೇಕೆಂದು ಸುಪ್ರೀಂಕೋರ್ಟ್ supreme court ಮಂಗಳವಾರ ಪ್ರತಿಪಾದಿಸಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಬೋಧನಾ ಶುಲ್ಕವನ್ನು ವರ್ಷಕ್ಕೆ 24 ಲಕ್ಷ ರೂ.ಗೆ ಹೆಚ್ಚಿಸುವ  ರಾಜ್ಯ ಸರಕಾರದ ನಿರ್ಧಾರವನ್ನು ತಳ್ಳಿಹಾಕಿದ್ದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯುತ್ತಾ ಅದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಆಂಧ್ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರಾದ ನಾರಾಯಣ ಮೆಡಿಕಲ್ ಕಾಲೇಜ್ ಹಾಗೂ ಆಂಧ್ರಪ್ರದೇಶ ಸರಕಾರಕ್ಕೆ  5 ಲಕ್ಷ ರೂ.ಗಳ ದಂಡವನ್ನು  ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ವಿಧಿಸಿದೆ. ಈ ಮೊತ್ತವನ್ನು  ಆರು ವಾರಗಳೊಳಗೆ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಜಮೆ ಮಾಡಬೇಕೆಂದು ಸೂಚಿಸಿದೆ.

‘‘ವೈದ್ಯಕೀಯ ಕಾಲೇಜುಗಳಲ್ಲಿ ಬೋಧನಾ ಶುಲ್ಕವನ್ನು ಈ ಹಿಂದೆ ಇದ್ದ ನಿಗದಿತ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಿಸಿರುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ. ಶಿಕ್ಷಣವು ಲಾಭಗಳಿಸಲು ಇರುವ ಉದ್ಯಮವಲ್ಲ’’ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ತಿಳಿಸಿತು.

ಈ ಹಿಂದೆ ಆಂಧ್ರ ಹೈಕೋರ್ಟ್ ಬೋಧನಾಶುಲ್ಕ ಏರಿಕೆಯನ್ನು ತಿರಸ್ಕರಿಸಿ ನೀಡಿದ ತನ್ನ ತೀರ್ಪಿನಲ್ಲಿ ಆಂಧ್ರಪ್ರದೇಶ ಪ್ರವೇಶಾತಿ ಹಾಗೂ ಶುಲ್ಕ ನಿಯಂತ್ರಣ ಸಮಿತಿಯ (ಖಾಸಗಿ ಅನುದಾನ ರಹಿತ ವೃತ್ತಿಪರ ಸಂಸ್ಥೆಗಳಲ್ಲಿನ ವೃತ್ತಿಪರ ಕೋರ್ಸ್‌ಗಳಿಗೆ) ನಿಯಮಾವಳಿಗಳು -2006  ಪ್ರಕಾರ ಸಮಿತಿಯ ಶಿಫಾರಸು ಅಥವಾ ವರದಿ ಸಲ್ಲಿಕೆಯಾಗದೆ ಶುಲ್ಕಗಳನ್ನು ಹೆಚ್ಚಿಸಲು ಸಾಧ್ಯವಿಲ್ಲವೆಂಬ ಅಂಶದ ಬಗ್ಗೆ ಗಮನಸೆಳೆದಿತ್ತು.

Similar News