ಮೊರ್ಬಿ ಸೇತುವೆ ದುರಂತಕ್ಕೆ ಕೇಂದ್ರ ಸರಕಾರವೇ ಕಾರಣ: ಚಿದಂಬರಮ್

Update: 2022-11-08 18:30 GMT

ಅಹ್ಮದಾಬಾದ್, ನ. 8: ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಸಂಭವಿಸಿರುವ ಸೇತುವೆ ಕುಸಿತಕ್ಕೆ Morbi bridge collapse ಕೇಂದ್ರ ಸರಕಾರವೇ ಕಾರಣ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಮ್ P Chidambaram ಮಂಗಳವಾರ ಆರೋಪಿಸಿದ್ದಾರೆ. 

ಅಹ್ಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನ ಆಳ್ವಿಕೆಯನ್ನು ದಿಲ್ಲಿಯಿಂದಲೇ ನಡೆಸಲಾಗುತ್ತಿದೆಯೇ ಹೊರತು, ಮುಖ್ಯಮಂತ್ರಿ ಆಳ್ವಿಕೆ ನಡೆಸುತ್ತಿಲ್ಲ ಎಂದು ಹೇಳಿದರು. ‘‘ಮೊರ್ಬಿ ಸೇತುವೆ ಕುಸಿತವು ಗುಜರಾತ್‌ಗೆ ಕೆಟ್ಟ ಹೆಸರು ತಂದಿದೆ. ಅತ್ಯಂತ ಆಘಾತಕಾರಿ ವಿಚಾರವೆಂದರೆ, ಈ ದುರಂತಕ್ಕಾಗಿ ಸರಕಾರದ ಪರವಾಗಿ ಯಾರೂ ಕ್ಷಮೆ ಕೋರಿಲ್ಲ. ದುರಂತದ ಜವಾಬ್ದಾರಿಯನ್ನು ಹೊತ್ತು ಯಾರೂ ರಾಜೀನಾಮೆ ನೀಡಿಲ್ಲ’’ ಎಂದು ಅವರು ಹೇಳಿದರು.

‘‘ಗುಜರಾತ್ ಹೈಕೋರ್ಟ್ gujarat high court ಸರಕಾರಕ್ಕೆ ನೋಟಿಸ್ ನೀಡಿದೆ. ಹೈಕೋರ್ಟ್ ಈ ಪ್ರಶ್ನೆಗಳನ್ನು ಹಾಗೂ ಇತರ ಪ್ರಶ್ನೆಗಳನ್ನು ಕೇಳುತ್ತದೆ ಮತ್ತು ಉತ್ತರಗಳನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದರು.

ಗುಜರಾತ್‌ನ gujarat ಬಿಜೆಪಿ bjp ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ರಾಜ್ಯದಲ್ಲಿ ಬಿಜೆಪಿ ಸರಕಾರವು 1998ರಿಂದ ನಿರಂತರವಾಗಿ ಅಧಿಕಾರದಲ್ಲಿದೆ. ಹಾಲಿ ವಿಧಾನಸಭೆಯನ್ನು 2017ರಲ್ಲಿ ಆರಿಸಲಾಗಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ, ಅಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಇದು ಮುಖ್ಯಮಂತ್ರಿಗಳ ಕಳಪೆ ನಿರ್ವಹಣೆಗೆ ಉದಾಹರಣೆಯಾಗಿದೆ. ಚುನಾವಣೆಯು 2023ರಲ್ಲಿ ನಡೆಯುವುದಾದರೆ, ಈಗಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ಗೂ ಹಿಂದಿನ ಮುಖ್ಯಮಂತ್ರಿಗಳದೇ ಗತಿಯಾಗುತ್ತಿತ್ತು’’ ಎಂದು ಅವರು ಅಭಿಪ್ರಾಯಪಟ್ಟರು.

Similar News