ಫಿಫಾ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ತಾತ್ಕಾಲಿಕ ಗ್ರಾಮವನ್ನು ನಿರ್ಮಿಸಿದ ಕತರ್

Update: 2022-11-10 16:36 GMT

ದೋಹಾ: ಕತಾರ್ ಬುಧವಾರ ತನ್ನ ವಿಮಾನ ನಿಲ್ದಾಣಗಳ ಸಮೀಪ ಫಿಫಾ ವಿಶ್ವಕಪ್‌ಗಾಗಿ ಬರುವ ಅಭಿಮಾನಿಗಳಿಗಾಗಿಯೇ 6,000-ಕ್ಯಾಬಿನ್ ಮನೆಗಳನ್ನು ಹೊಂದಿರುವ ತಾತ್ಕಾಲಿಕ ಗ್ರಾಮವನ್ನು ಅನಾವರಣಗೊಳಿಸಿದೆ. ವಿಶ್ವಕಪ್‌ ವೀಕ್ಷಿಸಲು ಬರುವ ಅಭಿಮಾನಿ ಪ್ರವಾಸಿಗಳಿಗೆ ಈ ತಾತ್ಕಾಲಿಕ ಕ್ಯಾಬಿನ್‌ ಮನೆಗಳನ್ನು ನಿರ್ಮಿಸಲಾಗಿದೆ.

ಇಲ್ಲಿಗೆ ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಮತ್ತು ಯೋಜಿತ ತಾತ್ಕಾಲಿಕ ರೆಸ್ಟೋರೆಂಟ್ ಮತ್ತು ಅಗತ್ಯ ಸಾಮಾಗ್ರಿಗಳ ಅಂಗಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಒಟ್ಟಾರೆ ಕ್ಯಾಬಿನ್‌ಗಳು 12,000 ಜನರು ವಾಸಿಸಲು ಸಮರ್ಥವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃತಕ ಹಸಿರು ಹುಲ್ಲಿನ ಹೊರಭಾಗದ ವಾಕಿಂಗ್ ಮಾರ್ಗಗಳು, ಬೀನ್-ಬ್ಯಾಗ್ ಶೈಲಿಯ ಕುರ್ಚಿಗಳನ್ನು ಈ ಪ್ರದೇಶದಲ್ಲಿ ಸಂಯೋಜಿಸಲಾಗಿದೆ. ಅಭಿಮಾನಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ದೊಡ್ಡ ಪರದೆಯನ್ನೂ ಇಲ್ಲಿ ಅಳವಡಿಸಲಾಗಿದೆ. ಕೆಲಸಗಾರರು ಸೈಟ್‌ನ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.

 ಪ್ರತಿಯೊಂದೂ ಕ್ಯಾಬಿನ್‌ಗಳು ತೆಳುವಾದ ಗೋಡೆಗಳನ್ನು ಹೊಂದಿದ್ದು, ಅವಳಿ ಹಾಸಿಗೆಗಳು, ನೈಟ್‌ಸ್ಟ್ಯಾಂಡ್, ಸಣ್ಣ ಟೇಬಲ್ ಮತ್ತು ಕುರ್ಚಿ, ಹವಾನಿಯಂತ್ರಣ, ಟಾಯ್ಲೆಟ್ ಮತ್ತು ಶವರ್‌ ಮೊದಲಾದ  ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಪಂದ್ಯಾವಳಿಗಾಗಿ ಸುಮಾರು 60% ಕ್ಯಾಬಿನ್‌ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಕತಾರ್‌ನ ಸುಪ್ರೀಂ ಕಮಿಟಿ ಫಾರ್ ಡೆಲಿವರಿ ಮತ್ತು ಲೆಗಸಿಯಲ್ಲಿ ವಸತಿ ಮುಖ್ಯಸ್ಥ ಒಮರ್ ಅಲ್-ಜಾಬರ್ ಹೇಳಿದ್ದಾರೆ.

Full View

Similar News