ಫ್ಲೋರಿಡಾಗೆ ಅಪ್ಪಳಿಸಿದ ಚಂಡಮಾರುತ: ವಿಮಾನ ನಿಲ್ದಾಣ, ಶಾಲೆಗಳು ಬಂದ್

Update: 2022-11-10 17:24 GMT

ನ್ಯೂಯಾರ್ಕ್, ನ.10: ನಿಕೋಲೆ ಚಂಡಮಾರುತ (Hurricane Nicole)ಅಮೆರಿಕದ ಫ್ಲೋರಿಡಾ ರಾಜ್ಯದ ಕರಾವಳಿಗೆ  ಅಪ್ಪಳಿಸಿದ್ದು ಭಾರೀ ಗಾಳಿ ಮಳೆಯ ಕಾರಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಫ್ಲೋರಿಡಾ(Florida)ದ 67 ಕೌಂಟಿಗಳ ಪೈಕಿ 45 ಕೌಂಟಿಗಳಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿದೆ. ವಿದ್ಯುತ್ ಸ್ಥಗಿತದ ಸಮಸ್ಯೆಗೆ ಸ್ಪಂದಿಸಲು ಹೆಚ್ಚುವರಿ ಸಿಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಮಾಧ್ಯಮಗಳು  ವರದಿ ಮಾಡಿವೆ. 

ನವೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಚಂಡಮಾರುತ ಅಪ್ಪಳಿಸುವುದು ಅತ್ಯಂತ ಅಪರೂಪದ ವಿದ್ಯಮಾನವಾಗಿದ್ದು 37 ವರ್ಷದ ಬಳಿಕ ಇದು ಸಂಭವಿಸಿದೆ. ಪಶ್ಚಿಮ ವಾಯವ್ಯದತ್ತ ಚಂಡಮಾರುತ ಮುಂದುವರಿಯಲಿದ್ದು ಶುಕ್ರವಾರ ಅಪ್ಪಲಾಚಿಯನ್ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

Similar News